ಪ್ರಧಾನಿ ಮೋದಿಗೆ ಮಣಿಪುರಕ್ಕಿಂತ ಇಸ್ರೇಲ್ ಮೇಲೆ ಹೆಚ್ಚು ಆಸಕ್ತಿ: ರಾಹುಲ್ ಗಾಂಧಿ

Prasthutha|

ಐಜೋಲ್: ಪ್ರಧಾನಿ ನರೇಂದ್ರ ಮೋದಿಗೆ ಮಣಿಪುರಕ್ಕಿಂತ ಇಸ್ರೇಲ್ ಮೇಲೆಯೇ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಮಿಜೋರಾಂನ ಐಜೋಲ್ ನಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕಿಂತ ಇಸ್ರೇಲ್-ಹಮಾಸ್ ಯುದ್ಧದ ಬಗೆಗಿನ ಆಸಕ್ತಿಯೇ ಹೆಚ್ಚಿದ್ದಂತಿದೆ ಎಂದಿದ್ದಾರೆ.


ಪ್ರಧಾನಿ ಮತ್ತು ಭಾರತ ಸರ್ಕಾರವು ಇಸ್ರೇಲ್ ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತುಂಬಾ ಆಸಕ್ತಿ ಹೊಂದಿದೆ, ಆದರೆ ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಇಲ್ಲ ಎಂಬುದು ನನಗೆ ಆಶ್ಚರ್ಯಕರವಾಗಿದೆ ಎಂದಿದ್ದಾರೆ.

Join Whatsapp