ಟಾಟಾರನ್ನು ಸಿಂಗೂರಿನಿಂದ  ಸಿಪಿಐಎಂ ಓಡಿಸಿತು, ನಾನಲ್ಲ: ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತಾ:  ಪಶ್ಚಿಮ ಬಂಗಾಳದಿಂದ ಟಾಟಾ ಮೋಟಾರ್ಸ್ ಅನ್ನು ಓಡಿಸಿದ್ದು ತಾನಲ್ಲ, ಸಿಪಿಐಎಂ. ಅವರು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಯನ್ನು ಮಾತ್ರ ನಾನು ರೈತರಿಗೆ ಹಿಂದಿರುಗಿಸಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ,

- Advertisement -

ದುರ್ಗಾ ಪೂಜೆಯ ನಂತರದ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಹೂಗ್ಲಿ ಜಿಲ್ಲೆಯ ಸಿಂಗೂರ್ ನಲ್ಲಿರುವ ಟಾಟಾ ಮೋಟಾರ್ಸ್ ನ ನ್ಯಾನೋ ಕಾರ್ಖಾನೆಗಾಗಿ ಹಿಂದಿನ ಎಡರಂಗ ಸರ್ಕಾರವು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮಾತ್ರ ಜನರಿಗೆ ಹಿಂದಿರುಗಿಸಿದ್ದೇನೆ ಎಂದು ಹೇಳಿದರು.

ನಾನು ಟಾಟಾಗಳನ್ನು ಪಶ್ಚಿಮ ಬಂಗಾಳದಿಂದ ಓಡಿಸಿದ್ದೇನೆ ಎಂದು ಜನರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಾಗೆ ಮಾಡಲಿಲ್ಲ, ಆದರೆ ಸಿಪಿಐಎಂ ಅವರನ್ನು ಓಡಿಸಿತು ಎಂದು ಆರೋಪಿಸಿದರು.

- Advertisement -

ನೀವು (ಸಿಪಿಐಎಂ) ಈ ಯೋಜನೆಗಾಗಿ ಜನರಿಂದ ಬಲವಂತವಾಗಿ ಭೂಮಿಯನ್ನು ತೆಗೆದುಕೊಂಡಿದ್ದೀರಿ, ನಾವು ಆ ಭೂಮಿಯನ್ನು ಜನರಿಗೆ ಹಿಂತಿರುಗಿಸಿದ್ದೇವೆ. ನಾವು ಅನೇಕ ಯೋಜನೆಗಳನ್ನು ಮಾಡಿದ್ದೇವೆ, ಆದರೆ ಯಾರಿಂದಲೂ ಬಲವಂತವಾಗಿ ಯಾವುದೇ ಭೂಮಿಯನ್ನು ತೆಗೆದುಕೊಳ್ಳಲಿಲ್ಲ. ನಾವು ಬಲವಂತವಾಗಿ ಭೂಮಿಯನ್ನು ಏಕೆ ತೆಗೆದುಕೊಳ್ಳಬೇಕು? ಇಲ್ಲಿ ಭೂಮಿಯ ಕೊರತೆ ಇಲ್ಲ” ಎಂದು ಅವರು ಹೇಳಿದರು.

ವಿರೋಧ ಪಕ್ಷಗಳು ಬ್ಯಾನರ್ಜಿ ಅವರ ಹೇಳಿಕೆಯನ್ನು ಟೀಕಿಸಿದ್ದು, ಸಿಪಿಐಎಂ ಮಮತಾ ಅವರ ಆರೋಪವನ್ನು ತಳ್ಳಿಹಾಕಿದೆ.

Join Whatsapp