ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಪತ್ನಿಯ ಫೇಸ್‌ ಬುಕ್‌ ಪೇಜ್ ಹ್ಯಾಕ್‌

Prasthutha|

ವಿಜಯಪುರ: ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಪತ್ನಿಯ ಫೇಸ್‌ ಬುಕ್‌ ಪೇಜ್ ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು, ಇಲ್ಲಸಲ್ಲದ ಫೋಟೋ ಮತ್ತು ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

- Advertisement -

ಎಂ.ಬಿ. ಪಾಟೀಲ್ ಅವರ ಪತ್ನಿ ಆಶಾರಾಣಿ ಪಾಟೀಲರ ಫೇಸ್‌ ಬುಕ್‌ ಪೇಜ್ ಹ್ಯಾಕ್ ಆಗಿದ್ದು, ಲಾಗಿನ್ ಪಾಸವರ್ಡ್ ಬದಲಿಸಿದರೂ ಕೂಡ ಬೇಡವಾದ ಪೋಸ್ಟ್​ ಗಳನ್ನು ಮಾಡಲಾಗುತ್ತಿದೆ.

ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ ಎನ್‌ ಪಿಯ ಫೇಸ್‌ ಬುಕ್‌ ಅಕೌಂಟ್‌ ಗೆ ಆಶಾ ಪಾಟೀಲ ಪೇಜ್ ಆ್ಯಡ್ ಮಾಡಲಾಗಿತ್ತು. ಹ್ಯಾಕರ್ ​ಗಳು ಬಾಕ್ಸಿಂಗ್ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಇದರಿಂದ ಬೇಸತ್ತು ಅವರು ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp