ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸುವ ಮಸೂದೆಗೆ ತಮಿಳುನಾಡು ಅನುಮೋದನೆ

Prasthutha|

ಚೆನ್ನೈ: ಹುಕ್ಕಾ ಬಾರ್ ಗಳನ್ನು ನಿಷೇಧಿಸುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿದೆ.

- Advertisement -

ಬುಧವಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ರಾಜ್ಯದ ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಅವರು ಮಂಡಿಸಿದ್ದು, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಹಲವಾರು ರೆಸ್ಟೋರೆಂಟ್ ಗಳು ಸೇವೆ ಒದಗಿಸುವ ನೆಪದಲ್ಲಿ ಧೂಮಪಾನ ವಲಯಗಳು ಅಥವಾ ಪ್ರದೇಶಗಳಲ್ಲಿ ಹುಕ್ಕಾ ಪರಿಕಲ್ಪನೆಯನ್ನು ಅನುಮತಿಸಿವೆ. ಹೀಗಾಗಿ ಚೆನ್ನೈ ನಗರದಲ್ಲಿ ಹುಕ್ಕಾ ಬಾರ್ ಗಳು ದೊಡ್ಡ ಪ್ರಮಾಣದಲ್ಲಿ ಬೆಳೆದು ತೀವ್ರ ಆರೋಗ್ಯ ಅಪಾಯಗಳಿಗೆ ಕಾರಣವಾಗಿವೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

- Advertisement -

ರಾಜ್ಯದಲ್ಲಿ ಹುಕ್ಕಾ ಬಾರ್ ಗಳನ್ನು ನಿಯಂತ್ರಿಸಲು ಪ್ರಸ್ತುತ ಯಾವುದೇ ಕಾನೂನು ಜಾರಿಯಲ್ಲಿಲ್ಲ.

ಸಚಿವ ಎಂ.ಸುಬ್ರಮಣಿಯನ್ ಅವರು ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಕಾಯ್ದೆ, 2003 (2003 ರ ಕೇಂದ್ರ ಅಧಿನಿಯಮ 34) ಅನ್ನು ತಮಿಳುನಾಡು ರಾಜ್ಯಕ್ಕೆ ಸೂಕ್ತವಾಗಿ ಅನ್ವಯಿಸುವ ಮಸೂದೆಯನ್ನು ಮಂಡಿಸಿದರು.

Join Whatsapp