“ಹರ್ ಘರ್ ತಿರಂಗಾ” ಅಭಿಯಾನ ವೇಳೆ ಮಾಜಿ ಉಪಮುಖ್ಯಮಂತ್ರಿಗೆ ಗುದ್ದಿದ ಗೋವು !

Prasthutha|

ಮೆಹ್ಸಾನಾ: 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗಾ ಅಭಿಯಾನದ” ವೇಳೆ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮೇಲೆ ಗೋವುವೊಂದು ದಾಳಿ ನಡೆಸಿದ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ಸಂಭವಿಸಿದೆ.

ಗೋವು ಗುದ್ದಿದ ರಭಸಕ್ಕೆ ನಿತಿನ್ ಪಟೇಲ್ ಕೆಳಗಡೆ ಬಿದ್ದು ಕಾಲಿಗೆ ಪೆಟ್ಟಾಗಿದೆ.

- Advertisement -

ಶನಿವಾರ ಮಾಜಿ ಡಿಸಿಎಂ ನಿತಿನ್ ಪಟೇಲ್ ಸೇರಿ ಅನೇಕರು ರಾಷ್ಟ್ರಧ್ವಜ ಹಿಡಿದು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಏಕಾಏಕಿ ಜನರ ಮಧ್ಯೆ ನುಗ್ಗಿ ಬಂದ ಗೋವು ನೇರವಾಗಿ ನಿತಿನ್ ಪಟೇಲ್ ಅವರಿಗೆ ಗುದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -