ಕೊವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಸಿಇಒ ಗೆ ವೈ ಶ್ರೇಣಿ ಭದ್ರತೆ

Prasthutha|

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅದಾರ್ ಪೂನಾವಾಲಾ ಅವರಿಗೆ ವೈ-ಕೆಟಗರಿ ಭದ್ರತೆ ಒದಗಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ನಿರ್ಧರಿಸಿದೆ.

- Advertisement -

ಸೀರಮ್ ಇನ್ಸ್ಟಿಟ್ಯೂಟ್ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ, ಕೋವಿಶೀಲ್ಡ್ ನ ತಯಾರಕ ಕಂಪೆನಿಯಾಗಿದೆ, ಇದನ್ನು ಭಾರತದ ಲಸಿಕೆ ಡ್ರೈವ್ ನಲ್ಲಿ ಬಳಸಲಾಗುತ್ತಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಅಖಿಲ ಭಾರತ ಆಧಾರದ ಮೇಲೆ ಸೀರಮ್ ಸಿಇಒಗೆ ವೈ ವರ್ಗದ ಭದ್ರತೆಯನ್ನು ಒದಗಿಸಲಿದೆ ಎಂದು ಎಎನ್ ಐ ವರದಿ ಮಾಡಿದೆ.

- Advertisement -

ಎಸ್ ಐಐ ಅಧಿಕಾರಿ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ ೧೬ ರಂದು ಎಂಎಚ್ಎಗೆ ಪತ್ರ ಬರೆದು ಎಸ್ ಐಐ ಮುಖ್ಯಸ್ಥರಿಗೆ ಭದ್ರತೆ ಕೋರಿ ಪತ್ರ ಬರೆದ ನಂತರ ಪೂನಾವಾಲಾಗೆ ಭದ್ರತೆ ಒದಗಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.

ಕೋವಿಡ್-19 ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಪೂನ್ ವಾಲಾ ಅವರಿಗೆ ವಿವಿಧ ಗುಂಪುಗಳಿಂದ ಬೆದರಿಕೆಗಳು ಬಂದಿವೆ ಎಂದು ಸಿಂಗ್ ಪತ್ರದಲ್ಲಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ವೈ ಶ್ರೇಣಿ ವರ್ಗದಲ್ಲಿ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ೧೧ ಸಿಬ್ಬಂದಿಯ ಭದ್ರತಾ ವಿವರವನ್ನು ಒಳಗೊಂಡಿದೆ.

Join Whatsapp