ಕಪ್ಪನ್ ರನ್ನು ದಿಲ್ಲಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಪಾಪ್ಯುಲರ್ ಫ್ರಂಟ್ : ಸಾಲಿಸಿಟರ್ ಜನರಲ್ ರ ಸುಳ್ಳುಗಳಿಗೆ ತೀವ್ರ ಖಂಡನೆ

Prasthutha|

ಮಲಯಾಳಿ ಪತ್ರಕರ್ತ ಸಿದ್ದೀಕ್ ಕಾಪ್ಪನ್ ರನ್ನು ದಿಲ್ಲಿಗೆ ವರ್ಗಾಯಿಸುವ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಸ್ವಾಗತಿಸಿದ್ದಾರೆ. ಜೊತೆಗೆ ನ್ಯಾಯಕ್ಕಾಗಿ ಬೆಂಬಲಿಸಿದ ನಾಯಕರು, ಹೋರಾಟಗಾರರು ಮತ್ತು ನಾಗರಿಕ ಸಮಾಜವನ್ನು ಶ್ಲಾಘಿಸಿದ್ದಾರೆ. ಕೋರ್ಟ್ ನ ಈ ತೀರ್ಪು, ಸಿದ್ದೀಕ್ ಕಾಪ್ಪನ್ ಮತ್ತು ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಅಮಾಯಕರಿಗಾಗಿ ನ್ಯಾಯಕ್ಕಾಗಿ ಧ್ವನಿ ಎತ್ತಿದ ಎಲ್ಲಾ ನಾಗರಿಕರು ಮತ್ತು ಗುಂಪುಗಳಿಗೆ ತಾತ್ಕಲಿಕ ನೆಮ್ಮದಿಯನ್ನು ಉಂಟು ಮಾಡಿದೆ.

- Advertisement -

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪಾಪ್ಯುಲರ್ ಫ್ರಂಟ್ ವಿರುದ್ಧ ಪ್ರಬಲ ಸುಳ್ಳು ಮತ್ತು ನಿರಾಧಾರ ಆರೋಪಗಳ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಕಾನೂನಾತ್ಮಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಪರ್ಕ ಹೊಂದುವುದೇ ಅಪರಾಧವಾಗಿದೆ ಎಂಬಂತೆ ಬಿಂಬಿಸಲು ಅವರು ಪ್ರಯತ್ನಿಸಿದರು. ಪಾಪ್ಯುಲರ್ ಫ್ರಂಟ್ ಅನ್ನು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ನಿರ್ಲಜ್ಜವಾಗಿ ಪ್ರತಿಪಾದಿಸಿದ್ದು, ಇದು ಸಂಪೂರ್ಣ ಸುಳ್ಳಾಗಿದೆ. ಕೇವಲ ಜಾರ್ಖಂಡ್ ನ ಬಿಜೆಪಿ ಸರಕಾರವು ಅಪ್ರಜಾಸತ್ತಾತ್ಮಕವಾಗಿ ಮತ್ತು ಸರ್ವಾಧಿಕಾರಿ ವಿಧಾನದ ಮೂಲಕ ಪಾಪ್ಯುಲರ್ ಫ್ರಂಟ್ ಮೇಲೆ ನಿಷೇಧ ಹೇರಿದ್ದು, ಹೈಕೋರ್ಟ್ ಒಮ್ಮೆ ಇದನ್ನು ತೆರವುಗೊಳಿಸಿತ್ತು. ಆದರೂ ಮತ್ತೇ ಇದನ್ನು ಮರುಹೇರಲಾಗಿತ್ತು.. ಹೈಕೋರ್ಟ್ ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದರೆ ಜಾರ್ಖಂಡ್ ನಲ್ಲಿ ಹೇರಲಾಗಿರುವ ನಿಷೇಧವು ತೆರವಾಗಲಿದೆ ಎಂಬ ವಿಶ್ವಾಸ ನಮಗಿದೆ. ಯಾಕೆಂದರೆ ಇದು ಸಂಪೂರ್ಣ ನಿರಾಧಾರ ಮತ್ತು ಕಾಲ್ಪನಿಕ ವಿಚಾರಗಳ ಮೇಲೆ ಆಧಾರಿತವಾಗಿದೆ.

ಸಾಲಿಸಿಟರ್ ಜನರಲ್ ರವರ ಸುಳ್ಳು ಪ್ರತಿಪಾದನೆಗಳು ಮತ್ತು ನ್ಯಾಯಾಲಯದ ದಿಕ್ಕು ತಪ್ಪಿಸುವ ಅವರ ದುರುದ್ದೇಶಪೂರಿತ ಪ್ರಯತ್ನಗಳನ್ನು ಪಾಪ್ಯುಲರ್ ಫ್ರಂಟ್ ಖಂಡಿಸುತ್ತದೆ. ಯುಪಿ ಸರಕಾರದ ನಿಲುವುಗಳು ಬಹಿರಂಗಗೊಂಡಿವೆ ಮತ್ತು ಈ ಒಟ್ಟು ಪ್ರಕರಣವು ದಲಿತ ಸಂತ್ರಸ್ತೆಯನ್ನು ನಿರ್ದಯವಾಗಿ ಅತ್ಯಾಚಾರ ಮತ್ತು ಹತ್ಯೆ ನಡೆಸಿದ ಬಳಿಕ ಯೋಗಿಯ ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ಪ್ರತೀಕಾರದ ಭಾಗವಾಗಿತ್ತು ಎಂಬುದು ಬಹಳ ಸ್ಪಷ್ಟವಾಗಿದೆ. ಸಿದ್ದೀಕ್ ಕಾಪ್ಪನ್ ಮತ್ತು ಬಂಧಿತ ಇತರ ವಿದ್ಯಾರ್ಥಿ ನಾಯಕರನ್ನು ಯುಪಿ ಪೊಲೀಸರು ಸಿದ್ಧಪಡಿಸಿದ ಸುಳ್ಳು ಕಥೆಯಲ್ಲಿ ಬಲಿಪಶು ಮಾಡಲಾಗಿದೆ. ಅಮಾಯಕರೆಲ್ಲರೂ ಜೈಲಿನಿಂದ ಬಿಡುಗಡೆಯಾಗುವ ವರೆಗೂ ನ್ಯಾಯವು ಪೂರ್ಣವಾಗಲಾರದು.

- Advertisement -

ನ್ಯಾಯಕ್ಕಾಗಿ ಧ್ವನಿ ಎತ್ತಿದ ನಾಗರಿಕ ಹಕ್ಕು ಸಂಘಟನೆಗಳು, ಪತ್ರಕರ್ತ ಸಂಘಟನೆಗಳು, ರಾಜಕೀಯ ಮತ್ತು ಸಾಮುದಾಯಿಕ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜನ ಸಾಮಾನ್ಯರನ್ನು ಪಾಪ್ಯುಲರ್ ಫ್ರಂಟ್ ಶ್ಲಾಘಿಸುತ್ತದೆ. ಸಂಪೂರ್ಣ ನ್ಯಾಯ ದೊರಕುವ ವರೆಗೂ ತಾವೆಲ್ಲರೂ ಇದೇ ರೀತಿ ದೃಢವಾಗಿ ನಿಲ್ಲಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ.

Join Whatsapp