ಯಾವುದೇ ಮುನ್ನೆಚ್ಚರಿಕೆ ಪಾಲಿಸದೆ ಮಂಗಳೂರಿನಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು | ಅಧಿಕಾರಿಗಳಿಂದ ಮೌನ ಸಮ್ಮತಿ !

Prasthutha|

ಮಂಗಳೂರು : ಕೋವಿಡ್ ನಿಗ್ರಹಕ್ಕೆಂದು ರಾಜ್ಯ ಸರಕಾರ ಹೇರಿರುವ ಲಾಕ್ ಡೌನ್ ನ ಎರಡನೇ ದಿನ ಬೆಳಗ್ಗೆ ಮಂಗಳೂರಿನಲ್ಲಿ ಜನರು ಬೇಕಾ ಬಿಟ್ಟಿ ಒಡಾಡುತ್ತಿರುವುದು ಕಂಡು ಬಂದಿದೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಖರೀದಿಗೆಂದು ಗ್ರಾಹಕರು ಮುಗಿ ಬಿದ್ದಿರುವ ದೃಶ್ಯಗಳು ಕಂಡು ಬಂದಿದೆ. ಅಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡುವಲ್ಲಿ ಅವರು ವಿಫಲರಾಗಿದ್ದಾರೆ.

- Advertisement -

ಈ ನಡುವೆ ವ್ಯಾಪಾರಿಗಳು ಕೂಡಾ ಯಾವುದೇ ಭಯವಿಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ. ಅಲ್ಲೂ ಕೂಡಾ ಮಾಸ್ಕ್, ಸಾಮಾಜಿಕ ಅಂತರಗಳು ಕಾಣೆಯಾಗಿದೆ. ಪೊಲೀಸ್ ಅಧಿಕಾರಿಗಳಾಗಲಿ ಅಥವಾ ನಗರ ಪಾಲಿಕೆಯ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಒಟ್ಟಾರೆಯಾಗಿ ಅಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು ಎಂದು ಸಾರ್ವಜನಿಕರು ದೂರಿದ್ದಾರೆ.

Join Whatsapp