ಕೋವಿಡ್‌ ವೈರಸ್‌ ವುಹಾನ್‌ ಲ್ಯಾಬ್‌ ನಿಂದ ಬಂದಿರಬಹುದು: ಅಮೆರಿಕ ಅಧ್ಯಯನ ವರದಿ

Prasthutha|

ವಾಷಿಂಗ್ಟನ್‌ : “ಚೀನಾದ ವುಹಾನ್‌ ಲ್ಯಾಬ್‌ ನಿಂದ ಕೋವಿಡ್‌ ವೈರಸ್‌ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಊಹೆಯ ಸಮರ್ಥನೀಯ ಮತ್ತು ತನಿಖೆಗೆ ಅರ್ಹವಾಗಿದೆ” ಎಂದು ಅಮೆರಿಕದ ರಾಷ್ಟ್ರೀಯ ಪ್ರಯೋಗಲಾಯದ ಅಧ್ಯಯನ ಹೇಳಿರುವುದಾಗಿ ʼದಿ ವಾಲ್‌ ಸ್ಟ್ರೀಟ್‌  ಜರ್ನಲ್‌ʼ ವರದಿ ಮಾಡಿದೆ.

ಕ್ಯಾಲಿಫೋರ್ನಿಯಾದ ‘ಲಾರೆನ್ಸ್‌ ಲಿವರ್ಮೋರ್‌ ರಾಷ್ಟ್ರೀಯ ಪ್ರಯೋಗಾಲಯʼವು ಈ ಅಧ್ಯಯನವನ್ನು 2020 ರ ಮೇ ತಿಂಗಳಿನಲ್ಲಿ ಸಿದ್ಧಪಡಿಸಿತ್ತು.

- Advertisement -

ಕೋವಿಡ್‌ ವಂಶವಾಹಿ ವಿಶ್ಲೇಷಣೆಯ ಬಗ್ಗೆ ‘ಲಾರೆನ್ಸ್‌ ಲಿವರ್ಮೋರ್‌ʼನ ಅಧ್ಯಯನ ಗಮನ ಸೆಳೆದಿತ್ತು ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ಹೇಳಿದೆ. ಆದರೆ, ʼವಾಲ್‌ ಸ್ಟ್ರೀಟ್‌ ಜರ್ನಲ್‌ʼ ವರದಿಯ ಬಗ್ಗೆ ‘ಲಾರೆನ್ಸ್‌ ಲಿವರ್ಮೋರ್‌ʼ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಈಗಾಗಲೇ ಮಾಹಿತಿ ಸಂಗ್ರಹಿಸಲು ತಮ್ಮ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ. ಗುಪ್ತಚರ ಸಂಸ್ಥೆಗಳು ಈ ಎರಡೂ ಸಾಧ್ಯತೆಗಳಲ್ಲಿ ಒಂದನ್ನು ದೃಢವಾಗಿ ಪ್ರತಿಪಾದಿಸುವ ನಿರ್ಧಾರಕ್ಕೆ ಬಂದಿಲ್ಲ.

- Advertisement -