ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ನೀಡಿದ್ದ ಕೋವಿಡ್‌ ಔಷಧಿ ಪಡೆದ ಮೊದಲ ಭಾರತೀಯ

Prasthutha|

ನವದೆಹಲಿ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೋವಿಡ್‌ ಪೀಡಿತರಾಗಿದ್ದಾಗ ಅವರಿಗೆ ನೀಡಲಾಗಿದ್ದ ಕೋವಿಡ್‌ ಔಷಧಿಯನ್ನು ಭಾರತದಲ್ಲಿ ಮೊದಲ ಬಾರಿ ಪಡೆದ ಹರ್ಯಾಣದ 84ರ ಹರೆಯದ ವ್ಯಕ್ತಿ ಸುದ್ದಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ಕೊರೊನ ಚಿಕಿತ್ಸೆ ಪಡೆಯುತ್ತಿದ್ದ ಮೊಹಬ್ಬತ್‌ ಸಿಂಗ್‌ ರೆಜೆನೆರಾನ್‌ ಔಷಧವನ್ನು ಮಂಗಳವಾರ ಪಡೆದಿದ್ದಾರೆ.

- Advertisement -

ಈ ಔಷಧ ಪಡೆದ ಹಲವಾರು ಮಂದಿ ಕೋವಿಡ್‌ ಸೋಂಕಿನಿಂದ ತ್ವರಿತವಾಗಿ ಗುಣಮುಖರಾಗಿದ್ದಾರೆ. ಮೇದಾಂತ ಗುರುಗ್ರಾಮ್‌ ನ ಆಸ್ಪತ್ರೆಯಲ್ಲಿ 30 ನಿಮಿಷಗಳ ಪ್ರಕ್ರಿಯೆಯಲ್ಲಿ ಈ ಔಷಧಿಯನ್ನು ಸಿಂಗ್‌ ಗೆ ನೀಡಲಾಗಿದೆ.

ಕ್ಯಾಸಿರಿವಿಮಾಬ್‌ ಮತ್ತು ಇಮ್ಡೆವಿಮಾಬ್‌ ಎಂಬ ಎರಡು ಆಯಂಟಿಬಾಡಿಗಳನ್ನೊಳಗೊಂಡ ಔಷಧಿಯು ಸೋಮವಾರ ಭಾರತಕ್ಕೆ ಆಗಮಿಸಿತ್ತು. ಈ ಔಷಧಿಯು ರೆಮ್ಡೆಸಿವಿರ್‌ ಅಥವಾ ಟೊಸಿಲಿಝುಮಾಬ್‌ ನಂತಹ ಔಷಧಗಳಿಗಿಂತ ಭಿನ್ನವಾದುದು ಎಂದು ಮೇದಾಂತದ ನಿರ್ದೇಶಕ ಡಾ. ನರೇಶ್‌ ಟೆಹ್ರಾನ್‌ ಹೇಳಿದ್ದಾರೆ.

- Advertisement -

ಈ ಔಷಧಿ ಪಡೆದ ಶೇ.80ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದಿಲ್ಲ. ಇದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ ಮತ್ತು ರೋಗ ಲಕ್ಷಣದ ಅವಧಿಯನ್ನು ಕಡಿಮೆಗೊಳಿಸಿದೆ.  

Join Whatsapp