ಕುಂಭಮೇಳದಲ್ಲಿ ಕೋವಿಡ್ ಪರೀಕ್ಷೆಯ ವರದಿಯಲ್ಲಿ ಅನುಮಾನ : ಹರಿದ್ವಾರಕ್ಕೆ ಬರದವರ ಹೆಸರಲ್ಲೂ ಫಲಿತಾಂಶ!

Prasthutha: June 15, 2021

50ಕ್ಕೂ ಹೆಚ್ಚು ವರದಿಗಳಲ್ಲಿ ಒಂದೇ ಮೊಬೈಲ್ ಸಂಖ್ಯೆ!

ಪಾಸಿಟಿವ್ ಸಂಖ್ಯೆ ಕಡಿಮೆ ಮಾಡಲು ನಕಲಿ ವರದಿ ಸೃಷ್ಟಿಸಲಾಯಿತೇ?

ಹೊಸದಿಲ್ಲಿ: ಕುಂಭಮೇಳದಲ್ಲಿ ಭಾಗವಹಿಸಿದವರ ಮೇಲೆ ನಡೆಸಿದ ಒಂದು ಲಕ್ಷ ಕೋವಿಡ್ ಪರೀಕ್ಷೆಗಳ ಫಲಿತಾಂಶ ಸುಳ್ಳು ಎಂದು ವರದಿಯಾಗಿದೆ.

ಮಾದರಿಗಳನ್ನು ಸಂಗ್ರಹಿಸಲು ಏಜೆನ್ಸಿಯಿಂದ ನೇಮಕಗೊಂಡ 200 ಜನರು ಹರಿದ್ವಾರಕ್ಕೆ ಬಂದೇ ಇಲ್ಲ ಎಂದು ಉತ್ತರಾಖಂಡ ಆರೋಗ್ಯ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಕನಿಷ್ಠ 1ಲಕ್ಷ ಕೋವಿಡ್ ತಪಾಸಣಾ ವರದಿಗಳನ್ನು ಖಾಸಗಿ ಸಂಸ್ಥೆಯೊಂದು ನಕಲಿಯಾಗಿ ಸೃಷ್ಟಿಸಿದೆ ಎಂದು 1,600 ಪುಟಗಳ ತನಿಖಾ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

50ಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗಾಗಿ ನೋಂದಾಯಿಸಲು ಒಂದೇ ಫೋನ್ ನಂಬರ್ ಬಳಸಲಾಗಿದ್ದು, ಪರೀಕ್ಷೆ ನಡೆಸಲಾಗಿದೆ ಎಂದು ನಮೂದಿಸಿದವರ ಪಲಿತಾಂಶ, ವಿಳಾಸಗಳು ಮತ್ತು ಹೆಸರುಗಳನ್ನು ನಕಲಿಯಾಗಿ ಸೃಷ್ಠಿಸಲಾಗಿದೆ. ಹರಿದ್ವಾರದ ಒಂದು ಮನೆಯಿಂದ ಕೋವಿಡ್ ತಪಾಸಣೆಗೆ 530 ಮಾದರಿಗಳನ್ನು ತೆಗೆದುಕೊಂಡಿರುವುದಾಗಿ ವರದಿಯಲ್ಲಿ ಉಲ್ಲಾಖಿಸಲಾಗಿದೆ. ಕುಂಭಮೇಳದ ಸಮಯದಲ್ಲಿ ಖಾಸಗಿ ಏಜೆನ್ಸಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವಿಟಿ ಪ್ರಮಾಣವು ಶೇಕಡಾ 0.18 ಆಗಿತ್ತು ಎಂದು ವರದಿ ಹೇಳಿತ್ತು. 1ಲಕ್ಷ ಜನರ ಕೋವಿಡ್ ಪರೀಕ್ಷೆಯಲ್ಲಿ ಕೇವಲ 177 ಜನರಿಗೆ ಸೋಂಕು ತಗುಲಿರುವುದಾಗಿ ತಿಳಿಸಿತ್ತು. ಇದೆಲ್ಲವೂ ಪರೀಕ್ಷೆ ನಡೆಸದೆ ಸುಳ್ಳು ಮಾಹಿತಿ ನೀಡಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ.

ಕುಂಭಮೇಳದಲ್ಲಿ ಭಾಗವಹಿಸದ ಪಂಜಾಬ್ ಮೂಲದ ವ್ಯಕ್ತಿಗೆ ಹರಿದ್ವಾರ ಆರೋಗ್ಯ ಇಲಾಖೆಯಿಂದ ನೆಗೆಟಿವ್ ವರದಿ ಬಂದಿರುವುದರಿಂದಾಗಿ ಈ ನಕಲಿ ವರದಿಗಳು ಬಹಿರಂಗಗೊಂಡಿದೆ. ಅವರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಗೆ ದೂರು ನೀಡಿದಾಗ ತನಿಖೆಯನ್ನು ಪ್ರಾರಂಭಿಸಲಾಗಿದೆ. ಪರೀಕ್ಷೆಗೊಳಪಟ್ಟವರು ನೀಡಿದ ಅನೇಕ ಫೋನ್ ನಂಬರ್ ಗಳು ನಕಲಿಯಾಗಿದೆ. ಕಾನ್ಪುರ, ಮುಂಬೈ, ಅಹಮದಾಬಾದ್ ಮತ್ತು ಇತರ 18 ಸ್ಥಳಗಳ ಜನರು ಒಂದೇ ಫೋನ್ ನಂಬರನ್ನು ಒದಗಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.

ಏಜೆನ್ಸಿಯು ಎರಡು ಖಾಸಗಿ ಲ್ಯಾಬ್ ಗಳಿಗೆ ಮಾದರಿಗಳನ್ನು ಪೂರೈಸಿದ್ದು,ಈ ಎರಡು ಲ್ಯಾಬ್ ಗಳ ಬಗ್ಗೆ ತನಿಖೆ ನಡೆಯುತ್ತಿದೆ ಕುಂಭಮೇಳ ಆರೋಗ್ಯಾಧಿಕಾರಿ ಡಾ. ಅರ್ಜುನ್ ಸಿಂಗ್ ಸೆಂಗರ್ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ