ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ | ಮತ್ತಿಬ್ಬರ ಬಂಧನ

Prasthutha: June 15, 2021

ಮುಂಬೈ: ಫೆಬ್ರವರಿಯಲ್ಲಿ ಉದ್ಯಮಿ ಮುಖೇಶ್ ಅಂಬಾನಿಯ ದಕ್ಷಿಣ ಮುಂಬೈ ನಿವಾಸದ ಮುಂದೆ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆಯಾದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೆ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರನ್ನು ‌ಸಂತೋಷ್ ಶೆಲಾರ್ ಮತ್ತು ಆನಂದ್ ಜಾಧವ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮುಂಬೈ ಉಪನಗರ ಮಲಾಡ್ ನಿಂದ ಬಂಧಿಸಲಾಗಿದ್ದು, ಜೂನ್ 21 ರವರೆಗೆ ಎನ್‌ಐಎ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಫೆಬ್ರವರಿ 25 ರಂದು ಅಂಬಾನಿಯ ನಿವಾಸ ‘ಆಂಟಿಲಿಯಾ’ ಹೊರಗೆ ದೊರೆತ ಎಸ್‌ಯುವಿ ಮಾಲೀಕತ್ವವನ್ನು ಹೊಂದಿದ್ದ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ಅವರ ಹತ್ಯೆಯಲ್ಲಿ ಶೆಲಾರ್ ಮತ್ತು ಜಾಧವ್ ಪಾತ್ರವಿದೆಯೇ ಎಂದು ಎನ್‌ಐಎ ತನಿಖೆ ನಡೆಸುತ್ತಿದೆ. 

ಅಂಬಾನಿ ಭದ್ರತಾ ಬೆದರಿಕೆ ಪ್ರಕರಣ ಮತ್ತು ನಂತರದ ಹಿರೇನ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳು ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಕ್ರಿಕೆಟ್ ಬುಕ್ಕಿ ಸೇರಿದಂತೆ ಒಟ್ಟು ನಾಲ್ವರು ತನಿಖಾಧಿಕಾರಿಗಳಿಂದ ಮೊದಲೇ ಬಂಧಿಸಲ್ಪಟ್ಟಿದ್ದರು.ಬಂಧಿತ ಪೊಲೀಸರನ್ನು ನಂತರ ಸೇವೆಯಿಂದ ವಜಾಗೊಳಿಸಲಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ