March 30, 2021

ಇಂದು ತಮಿಳುನಾಡಿಗೆ ಮೋದಿ । #GoBackModi ಟ್ವಿಟ್ಟರ್ ಟ್ರೆಂಡ್ ಮೂಲಕ ‘ಸ್ವಾಗತ’ ಕೋರಿದ ನೆಟ್ಟಿಗರು !

►ಇಂಡಿಯಾ ಟ್ರೆಂಡಿಂಗ್ ನಂಬರ್ 1 | ಗಂಟೆಯೊಳಗಡೆ 1.80 ಲಕ್ಷ ಟ್ವೀಟ್

ತಮಿಳುನಾಡಿನ ಚುನಾವಣಾ ಪ್ರಚಾರಕ್ಕಾಗಿ ಇಂದು ಮೋದಿ ತಮಿಳುನಾಡಿಗೆ ಆಗಮಿಸಲಿದ್ದು, ಈ ವೇಳೆ ನೆಟ್ಟಿಗರು #GoBackModi ಎಂಬ ಹ್ಯಾಶ್ ಟ್ಯಾಗನ್ನು ಟ್ವಿಟ್ಟರಿನಲ್ಲಿ ಟ್ರೆಂಡ್ ಮಾಡುವ ಮೂಲಕ ವಿಶಿಷ್ಟವಾಗಿ ಮೋದಿಯನ್ನು ದ್ರಾವಿಡ್ ನೆಲಕ್ಕೆ ಸ್ವಾಗತ ಕೋರಿದ್ದಾರೆ. ಟ್ವಿಟ್ಟರ್ ಅಭಿಯಾನ ಪ್ರಾರಂಭಿಸಿದ ಗಂಟೆಗಳಲ್ಲಿ ಇದು ಭಾರತದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗಿ ಕಾಣಿಸಿಕೊಂಡಿತು. ಸುಮಾರು ಒಂದು ಲಕ್ಷದ 80 ಸಾವಿರದಷ್ಟು ಟ್ವೀಟ್ ಗಳು ಈ ವೇಳೆ ದಾಖಲಿಸಲ್ಪಟ್ಟಿದೆ. ಅದು ಇನ್ನೂ ಮುಂದುವರಿಯುತ್ತಲಿದ್ದು, ಅದರ ಅಂಕಿ ಸಂಖ್ಯೆಗಳು ಏರುತ್ತಲೇ ಇದೆ ಎನ್ನಲಾಗಿದೆ. ಭಾರತದಲ್ಲಿ ಈ ಹ್ಯಾಶ್ ಟ್ಯಾಗ್ ಹಲವು ಗಂಟೆಗಳಷ್ಟು ಕಾಲ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ.

ತಮಿಳುನಾಡಿನ ಧರ್ಮಾಪುರಂ ಹಾಗೂ ಪುದುಚೇರಿಯಲ್ಲಿ ಇಂದು ಮೋದಿ ಚುನಾವಣಾ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿಕ್ಕಿದ್ದಾರೆ. ಈ ವೇಳೆ ನೆಟ್ಟಿಗರು ಮೋದಿ ವಿರುದ್ಧ ಟ್ವಿಟ್ಟರಿನಲ್ಲಿ ಅಭಿಯಾನ ಕೈಗೊಂಡಿದ್ದು, ಅದಕ್ಕೆ ಭಾರೀ ಸ್ಪಂದನೆ ದೊರಕಿದೆ.  ಟ್ವಿಟ್ಟರಿಗರು ಸಾಮಾಜಿಕ ತಾಣಗಳ ಮೂಲಕವೇ ಮೋದಿಗೆ ಬಿಸಿ ಮುಟ್ಟಿಸಿದ್ದು, ತಮಿಳುನಾಡಿನ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಹಲವು ಟ್ವಿಟ್ಟರ್ ಖಾತೆದಾರರು ಈ ಹ್ಯಾಶ್ ಟ್ಯಾಗ್ ಬಳಸಿ ಮಾರ್ಮಿಕವಾಗಿ ಟ್ವೀಟ್ ಮಾಡುತ್ತಾ ಮೋದಿ ಕಾಲೆಳೆದಿದ್ದಾರೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!