ಕೊಡಗಿನಲ್ಲಿ ಇಂದು 428 ಮಂದಿಗೆ ಕೋವಿಡ್ ಪಾಸಿಟಿವ್

Prasthutha|

ಮಡಿಕೇರಿ:  ಜಿಲ್ಲೆಯಲ್ಲಿ ಬುಧವಾರ  428  ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಪಾಸಿಟಿವಿಟಿ ಪ್ರಮಾಣ ಶೇ.12.27 ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ತಿಳಿಸಿದ್ದಾರೆ.

- Advertisement -

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 37,262ಆಗಿದ್ದು,   ಒಟ್ಟು 438 ಮರಣ ಪ್ರಕರಣಗಳು ವರದಿಯಾಗಿದೆ. 1195 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ,  ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 166 ಆಗಿದೆ  ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Join Whatsapp