ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರ ಬಂಧನ ಖಂಡನೀಯ SDPI

Prasthutha: January 19, 2022

ಚಿತ್ರದುರ್ಗ : ಸ್ಥಳೀಯಾಡಳಿತ ಮತ್ತು ಬಿಜೆಪಿ ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಕುರಿತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಬಂಧನವನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸಿದ್ದಾರೆ.
ಬಾಳೆಕಾಯಿ ಶ್ರೀ ನಿವಾಸ್ ಅವರು ಚಿತ್ರದುರ್ಗದಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತಗಳ ಜನ ವಿರೋಧಿ ಮತ್ತು ಭ್ರಷ್ಟ ಆಡಳಿತದ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಎಸ್ ಡಿ ಪಿ ಐ ಹೊರಾಟ ಮತ್ತು ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಶಾಸಕರು ಪೊಲೀಸ್ ಇಲಾಖೆಗೆ ಒತ್ತಡ ಹಾಕಿಸಿ ಬಾಳೆಕಾಯಿ ಶ್ರೀ ನಿವಾಸ್ ಅವರನ್ನು ಬಂಧನ ಮಾಡಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀ ನಿವಾಸರನ್ನು ಬಿಡುಗಡೆಗೊಳಿಸುವ ಎಲ್ಲಾ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ರೀತಿ ಅಧಿಕಾರವರ್ಗದ ಒತ್ತಡಕ್ಕೊಳಗಾಗಿ ದಲಿತ ನಾಯಕರೊಬ್ಬರನ್ನು ಬಂಧನ ಮಾಡಲು ಮುಂದಾದ ಪೊಲೀಸ್ ಇಲಾಖೆಗೂ ನಾವು ಕಾನೂನಾತ್ಮಕ ಉತ್ತರವನ್ನು ನೀಡಲಿದ್ದೇವೆ. ಮುಂದೆ ಈ ರೀತಿಯಾಗಿ ಎಸ್ ಡಿ ಪಿ ಐ ಯನ್ನು ತಡೆಯ ಬಹುದು ಎಂಬ ಭ್ರಮೆಯಿಂದ ಚಿತ್ರದುರ್ಗದ ಪೊಲೀಸ್ ಇಲಾಖೆ ಹೊರ ಬರುವುದು ಉತ್ತಮ ಎಂದು ಎಸ್ ಡಿ ಪಿ ಐ ಎಚ್ಚರಿಕೆ ನೀಡಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!