ದೆಹಲಿಯಲ್ಲಿ ಗರಿಷ್ಠ ಕೋವಿಡ್ 19 ಪ್ರಕರಣ ಏರಿಕೆ | ಮತ್ತೊಮ್ಮೆ ಲಾಕ್ ಡೌನ್ ಗೆ ಸಲಹೆ

Prasthutha|

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ 19 ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಮತ್ತೊಮ್ಮೆ ಲಾಕ್ ಡೌನ್ ಹೇರುವ ಬಗ್ಗೆ ಒತ್ತಡಗಳು ಕೇಳಿಬರುತ್ತಿವೆ. ಹಬ್ಬದ ಸಮೀಪದಲ್ಲಿ ಸಾಮಾಜಿಕ ಅಂತರ ಕಾಯದೆ ಇರುವುದು ಮತ್ತು ವಾಯು ಮಾಲಿನ್ಯ ಹೆಚ್ಚುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಲಾಕ್ ಡೌನ್ ಮತ್ತೊಮ್ಮೆ ಹೇರುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಒಂದು ವಾರ ಭಾಗಶಃ ಲಾಕ್ ಡೌನ್ ಜಾರಿಗೊಳಿಸುವುದು ಸಹಾಯಕ್ಕೆ ಬರಬಹುದು. ಇಲ್ಲವಾದರೆ ಪರಿಸ್ಥಿತಿ ತೀರಾ ಗಂಭೀರವಾಗಬಹುದು ಎಂದು ದೆಹಲಿ ಫೋರ್ಟಿಸ್ ಸಿ ಡಿಒಸಿ ಆಸ್ಪತ್ರೆಯ ಅಧ್ಯಕ್ಷ ಅನೂಪ್ ಮಿಶ್ರಾ ಹೇಳಿದ್ದಾರೆ.

- Advertisement -

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಭಾನುವಾರ ಒಂದೇ ದಿನ 7,745 ಕೊರೊನ ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ. ಇತರ ಎಲ್ಲಾ ರಾಜ್ಯಗಳಿಗಿಂತ ದೆಹಲಿಯೊಂದರಲ್ಲೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಹಬ್ಬದ ಸೀಸನ್ ನಲ್ಲಿ ವಾಯು ಮಾಲಿನ್ಯ ಹೆಚ್ಚುವುದರಿಂದ, ಸೋಂಕಿತರ ಸಂಖ್ಯೆ ಹೆಚ್ಚಿದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುವುದು ಕಷ್ಟವಾದೀತು ಎನ್ನಲಾಗುತ್ತಿದೆ.

- Advertisement -