ಖ್ಯಾತ ಬಾಲಿವುಡ್ ನಟ ಆಸಿಫ್ ಬರ್ಸಾ ಶವವಾಗಿ ಪತ್ತೆ

Prasthutha|

ನವದೆಹಲಿ : ಹಿಮಾಚಲ ಪ್ರದೇಶದ ಮ್ಯಾಕ್ಲೆಯೋಡ್ ಗಂಜ್ ನಲ್ಲಿ ಖ್ಯಾತ ನಟ ಆಸಿಫ್ ಬರ್ಸಾ ಇಂದು ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಸಿಫ್ ಹೇಗೆ ಸತ್ತರು ಎಂಬುದನ್ನು ಪತ್ತೆಹಚ್ಚಲು ಸ್ಥಳಕ್ಕೆ ವಿಧಿವಿಜ್ಞಾನ ತಂಡ ಧಾವಿಸಿದೆ.

ಇದೊಂದು ಆತ್ಮಹತ್ಯೆಯೇ, ಅಸಹಜ ಸಾವೇ ಎಂಬುದನ್ನು ತಂಡ ಪತ್ತೆಹಚ್ಚಲಿದೆ ಎಂದು ಪೊಲೀಸರು ಹೇಳಿದ್ದಾರೆ. 53ನೇ ವಯಸ್ಸಿನಲ್ಲಿ ಆಸಿಫ್ ಸಾವು ಸಂಭವಿಸಿದೆ.

- Advertisement -

ಆಸಿಫ್ ಇತ್ತೀಚಿನ ಥ್ರಿಲ್ಲರ್ ಸೀರೀಸ್ ‘ಪಾತಾಳ್ ಲೋಕ್’ ನಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದ ನಟ. 1992ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದ ಕಥೆಯಾಧಾರಿತ ‘ಬ್ಲಾಕ್ ಫ್ರೈಡೆ’ ಮತ್ತು 2002ರ ಗುಜರಾತ್ ಗಲಭೆ ಆಧರಿತ ‘ಪರ್ಝಾನಿಯಾ’ ಮುಂತಾದ ಪ್ರಖ್ಯಾತ ಬಾಲಿವುಡ್ ಚಿತ್ರಗಳಲ್ಲಿಯೂ ಅವರು ನಟಿಸಿದ್ದರು.

ವಿದೇಶಿ ಚಿತ್ರಗಳಲ್ಲೂ ಆಸಿಫ್ ನಟಿಸಿದ್ದರು. ಇಂಗ್ಲಿಷ್, ಹಿಂದಿ, ಉರ್ದು ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದರು.

1967ರಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿರುವ ಆಸಿಫ್, ಕಲಾವಿದನಾಗುವ ಉದ್ದೇಶದಿಂದ 1989ರಲ್ಲಿ ಮುಂಬೈಗೆ ತೆರಳಿದ್ದರು.  

- Advertisement -