ಬಿಹಾರ ಫಲಿತಾಂಶ | ಜನರು ಕೆಲವೊಮ್ಮೆ ಎಂಥವರಿಗೂ ಎರಡು, ಮೂರನೇ ಅವಕಾಶ ನೀಡುತ್ತಾರೆ : ಸೋನು ಸೂದ್

Prasthutha|

ನವದೆಹಲಿ : ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಜನಪ್ರಿಯ ನಟ ಸೋನು ಸೂದ್, “ಬಿಹಾರದ ಜನರು ಸರಕಾರ ಲಾಕ್ ಡೌನ್ ಸಮಯದಲ್ಲಿ ಅವರಿಗೆ ಏನು ಮಾಡಿತೋ, ಅದರಲ್ಲೂ ಏನೋ ಒಳ್ಳೆಯದನ್ನೇ ನೋಡಿರಬೇಕು ಎಂದಿದ್ದಾರೆ.

“ಜನರು ಏನನ್ನಾದರೂ ಒಳ್ಳೆಯದನ್ನು ನಿರೀಕ್ಷಿಸುತ್ತಿರಬಹುದು, ನಮ್ಮ ಭಾರತದಲ್ಲಿ ಜನರು ಸಾಕಷ್ಟು ಭರವಸೆ ಹೊಂದಿದ್ದಾರೆ. ಜನ ಕೆಲವೊಮ್ಮೆ ಎಂಥವರಿಗೂ ಎರಡನೇ, ಮೂರನೇ ಅವಕಾಶವನ್ನು ನೀಡುತ್ತಾರೆ. ಜೊತೆಗೆ ತಮ್ಮ ಜೀವನಕ್ಕೆ ಭದ್ರ ಬುನಾದಿ ಬೇಕೆಂದೂ ಬಯಸುತ್ತಾರೆ’’ ಎಂದು ಸೂದ್ ಹೇಳಿದ್ದಾರೆ.

- Advertisement -

ಕೊರೊನ ವೈರಸ್ ಸೋಂಕಿನ ವೇಳೆ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿದ್ದ ಬಿಹಾರ ಸೇರಿದಂತೆ ಉತ್ತರ ಭಾರತದ ವಲಸಿಗರಿಗೆ ತಮ್ಮ ತವರಿಗೆ ತೆರಳಲು ಸಹಾಯ ಮಾಡಿದ್ದಲ್ಲದೆ, ತಮ್ಮಿಂದ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಿ ಸೂದ್ ಸುದ್ದಿಯಲ್ಲಿದ್ದರು. ಈ ವೇಳೆ ಯಾವುದೇ ಪೂರ್ವ ತಯಾರಿ ಇಲ್ಲದೆ ಲಾಕ್ ಡೌನ್ ಘೋಷಿಸಿದ್ದ ಎನ್ ಡಿಎ ಸರಕಾರಕ್ಕೆ ಹಿಡಿಶಾಪ ಹಾಕಿದ್ದ ಜನರು, ಸಸೂದ್ ಅವರನ್ನು ನಿಜವಾದ ಹೀರೋ ಎಂದು ಬಣ್ಣಿಸಿದ್ದರು.

- Advertisement -