ಕಾಡಿನಲ್ಲಿ ನೂರಾರು ಜಿಂಕೆಗಳಿಗೆ ಕೋವಿಡ್: ಕಾರಣ ತಿಳಿದ ಸಂಶೋಧಕರಿಗೆ ಕಾದಿತ್ತು ಆಶ್ಚರ್ಯ !

Prasthutha|

- Advertisement -

ವಾಷಿಂಗ್ಟನ್: ಪ್ರಪಂಚದಾದ್ಯಂತ ಕೊರೊನಾ ವೈರಸ್ ಹರಡುವುದರೊಂದಿಗೆ ಮಾನವರು ಮಾತ್ರವಲ್ಲದೆ ಪ್ರಾಣಿಗಳ ಆರೋಗ್ಯವೂ ಚಿಂತಾಜನಕವಾಗಿದೆ. ಅನೇಕ ಸ್ಥಳಗಳಲ್ಲಿ ಸಾಕುಪ್ರಾಣಿಗಳು ಮತ್ತು ಮೃಗಾಲಯದಲ್ಲಿರುವ ಪ್ರಾಣಿಗಳೂ ಸೋಂಕಿಗೆ ಒಳಗಾಗಿ ಸಾಯುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಪ್ರಾಣಿಗಳಲ್ಲಿ ರೋಗದ ಹರಡುವಿಕೆಯು ಹೆಚ್ಚುತ್ತಿವೆ ಎಂಬ ಆತಂಕಕಾರಿ ಮಾಹಿತಿಯು ಅಮೆರಿಕಾದಿಂದ ವರದಿಯಾಗಿದೆ.

ಅಮೆರಿಕದ ಅರಣ್ಯ ಪ್ರದೇಶದಲ್ಲಿ ವಾಸಿಸುವ ವೈಟ್ ಟೈಲ್ಸ್ ಪ್ರಭೇದದ ಜಿಂಕೆಗಳಲ್ಲಿ ಕೊರೊನಾ ವೈರಸ್ ರೋಗ ಹರಡಿರುವುದಾಗಿ ಪತ್ತೆ ಹಚ್ಚಲಾಗಿದೆ.ಇಲಿನಾಯ್ಸ್, ಮಿಚಿಗನ್, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್ ಮತ್ತು ಓಹಿಯೋ ಮುಂತಾದ ಕಡೆಗಳಲ್ಲಿ ನೂರಾರು ಜಿಂಕೆಗಳು ರೋಗ ಬಾಧಿಸಿರುವುದಾಗಿ ಪತ್ತೆ ಹಚ್ಚಲಾಗಿದೆ. 2020 ಡಿಸೆಂಬರ್ ನಲ್ಲಿ ಪೆನ್ಸಿಲ್ವೇನಿಯಾದಲ್ಲಿ ವೈಟ್ ಟೈಲ್ಡ್ ಪ್ರಭೇದದ ಜಿಂಕೆಗಳ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಕೋವಿಡ್ ಬಾಧಿಸಿದವುಗಳೆಂಬ ಫಲಿತಾಂಶ ಲಭಿಸಿದೆ. ಮಿಚಿಗನ್ ನಲ್ಲಿ ಪರೀಕ್ಷಿಸಿದವುಗಳಲ್ಲಿ ಶೇಕಡಾ 67ರಷ್ಟು ಮಾತ್ರ ಸೋಂಕಿಗೆ ಒಳಗಾಗಿವೆ. ಈ ಮಧ್ಯೆ ಸಾವಿರಾರು ಜಿಂಕೆಗಳು ಈಗಾಗಲೇ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಈ ಪರಿಸ್ಥಿತಿಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರದಿದ್ದರೆ 30 ಮಿಲಿಯನ್ ಪ್ರಾಣಿಗಳು ಸೋಂಕಿಗೆ ಒಳಗಾಗುತ್ತವೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.

- Advertisement -

ಆದರೆ ಇಲ್ಲಿಯವರೆಗೆ ಕಾಡು ಪ್ರಾಣಿಗಳಲ್ಲಿ ರೋಗ ಹೇಗೆ ಹರಡಿತು ಎಂಬುದರ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಮನುಷ್ಯ ವಿಸರ್ಜಿತ ತ್ಯಾಜ್ಯದೊಂದಿಗೆ ಬೆರೆತ ನೀರನ್ನು ಜಿಂಕೆಗಳು ಕುಡಿಯುವ ಮೂಲಕ ಸೋಂಕಿಗೆ ಒಳಗಾಗಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಈ ಮೊದಲು ರೋಗದಿಂದ ಪತ್ತೆಯಾದ ಪ್ರಾಣಿಗಳು ನೇರವಾಗಿ ಮಾನವರೊಂದಿಗೆ ಸಂಪರ್ಕದಲ್ಲಿದ್ದುದರಿಂದ ವನ್ಯ ಜೀವಿಗಳು ಸುರಕ್ಷಿತವಾಗಿರಬಹುದೆಂದು ಭಾವಿಸಲಾಗಿತ್ತು. ಆದರೆ ಜಿಂಕೆಗಳಲ್ಲಿ ರೋಗ ಲಕ್ಷಣ ಪತ್ತೆ ಹಚ್ಚುವುದರೊಂದಿಗೆ ಆ ಅನುಮಾನಕ್ಕೂ ತೆರೆ ಬಿತ್ತು. ಆದರೆ ಜಿಂಕೆಗಳಿಂದ ಮನುಷ್ಯರಿಗೆ ರೋಗ ಹರಡಿರುವುದಾಗಿ ಈ ವರೆಗೂ ವರದಿಯಾಗಲಿಲ್ಲ. ಆದರೆ ಜಿಂಕೆಗಳ ಮೇಲಿನ ಪರೀಕ್ಷೆಗಳಲ್ಲಿ ಸಂಶೋಧಕರು ಸಾರ್ಸ್ಕೋವ್ 2 ನ ಮೂರು ರೂಪಾಂತರಗಳನ್ನು ಗುರುತಿಸಿದ್ದಾರೆ. ಈ ರೋಗವು ಸ್ವತಃ ಪ್ರಾಣಿಗಳಲ್ಲಿ ಹರಡಿದರೆ ವೈರಸ್ ಗಳು ಅನುವಂಶಿಕವಾಗಿ ಮಾರ್ಪಟ್ಟು ಹೊಸ ರೂಪಾಂತರಗಳಾಗಿ ಬದಲಾಗಿ ಹೆಚ್ಚು ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಡಿಸೆಂಬರ್ 2020 ಮತ್ತು ಜನವರಿ 2021 ರಲ್ಲಿ ನಡೆಸಿದ ಅಧ್ಯಯನದ ಫಲಿತಾಂಶಗಳ ಬಗ್ಗೆ ಇನ್ನೂ ಕೆಲವು ಸ್ಪಷ್ಟತೆಯನ್ನು ಸಾಧಿಸಲು ಯುನೈಟೆಡ್ ಸ್ಟೇಟ್ಸ್ ನ ಪ್ರಾಣಿ ಮತ್ತು ಸಸ್ಯ ಆರೋಗ್ಯ ತಪಾಸಣಾ ಸೇವಾ ವಿಭಾಗದಿಂದ 2021 ಜುಲೈ ನಲ್ಲಿ ಹೆಚ್ಚು ವಿವರವಾದ ಅಧ್ಯಯನ ನಡೆಸಲಾಗಿತ್ತು. ವೈಟ್ ಟೈಲ್ಡ್ ಪ್ರಭೇದದ ಜಿಂಕೆಗಳಿಂದ ಸಂಗ್ರಹಿಸಿದ ಒಟ್ಟು ಮಾದರಿಗಳಲ್ಲಿ ಶೇಕಡಾ 33ರಷ್ಟು ಪ್ರತಿಕಾಯ ಇರುವುದು ಕಂಡುಬಂದಿದೆ. ಅದೇ ವೇಳೆ ಮಿಚಿಗನ್ ಒಂದರಲ್ಲೇ, ಶೇ.60ರಷ್ಟು ಜಿಂಕೆಗಳು ಸೋಂಕಿಗೆ ಒಳಗಾಗಿರುವುದಾಗಿ ತಿಳಿದು ಬಂದಿದೆ. ಕಾಡು ಪ್ರಾಣಿಗಳಲ್ಲಿ ರೋಗ ಹರಡುವಿಕೆಯು ಭವಿಷ್ಯದಲ್ಲಿ ಮಾನವರಿಗೆ ಕೋವಿಡ್ ಹರಡುವ ಸಾಧ್ಯತೆಯಿದೆ ಎಂಬುವುದಾಗಿ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

Join Whatsapp