ಜ್ವರವಿದ್ದವರು, ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳುವುದು ಬೇಡ : ಭಾರತ್ ಬಯೋಟೆಕ್

Prasthutha|

ಹೈದರಾಬಾದ್ : ಗರ್ಭಿಣಿಯರು, ಮಕ್ಕಳಿಗೆ ಹಾಲುಣಿಸುವ ಮಹಿಳೆಯರು ಕೋವಿಡ್ 19 ಲಸಿಕೆ ಕೋವ್ಯಾಕ್ಸಿನ್ ಸ್ವೀಕರಿಸದಂತೆ ಭಾರತ್ ಬಯೋಟೆಕ್ ಸಲಹೆ ನೀಡಿದೆ. ತೀವ್ರ ಜ್ವರವಿದ್ದರೆ, ರಕ್ತಸ್ರಾವ ಸಮಸ್ಯೆಯಿದ್ದರೂ ಕೋ ವ್ಯಾಕ್ಸಿನ್ ಲಸಿಕೆ ಸ್ವೀಕರಿಸದಂತೆ ಸೂಚಿಸಲಾಗಿದೆ.

- Advertisement -

ನಿಮಗೆ ಅಲರ್ಜಿಯ ಸಮಸ್ಯೆಯಿದ್ದರೂ ಭಾರತ್ ಬಯೋಟೆಕ್ ನ ಕೋವಿಡ್ 19 ಲಸಿಕೆ ಕೋವಾಕ್ಸಿನ್ ತೆಗೆದುಕೊಳ್ಳಬಾರದು.  ಭಾರತ್ ಬಯೋಟೆಕ್ ನ ಫ್ಯಾಕ್ಟ್ ಶೀಟ್ ನಲ್ಲಿ ಈ ವಿಷಯ ತಿಳಿಸಲಾಗಿದೆ. ಕೋ ವ್ಯಾಕ್ಸಿನ್ ಫ್ಯಾಕ್ಟ್ ಶೀಟ್ ಭಾರತ್ ಬಯೋಟೆಕ್ ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಲಸಿಕೆ ತೆಗೆದುಕೊಳ್ಳುವುದಕ್ಕೂ ಮೊದಲು ತಮ್ಮ ವೈದ್ಯಕೀಯ ಸ್ಥಿತಿಯ ಬಗ್ಗೆ ಲಸಿಕೆ ನೀಡುವವರಿಗೆ ತಿಳಿಸಬೇಕು ಎಂದು ಫ್ಯಾಕ್ಸ್ ಶೀಟ್ ನಲ್ಲಿ ತಿಳಿಸಲಾಗಿದೆ. ಕೋವಿಡ್ 19 ಅನ್ನು ತಡೆಯಲು ತುರ್ತು ಸಂದರ್ಭಗಳಲ್ಲಿ ಕೋವ್ಯಾಕ್ಸಿನ್ ಬಳಸಲು ಷರತ್ತುಪೂರ್ವಕವಾಗಿ ಅನುಮತಿಸಲ್ಪಟ್ಟಿದೆ.



Join Whatsapp