ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಪಶ್ಚಿಮ ಬಂಗಾಳದ ಸಹೋದರರಿಗೆ ಆಸರೆಯಾದ KCF

Prasthutha|

ಅಲ್ ಕೋಬರ್ : ಉದ್ಯೋಗ ಪರವಾನಿಗೆ ಮತ್ತು ವೇತನ ದೊರೆಯದೆ ಸಂಕಷ್ಟದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಉದ್ಯೋಗಿಗಳಿಗೆ ಕೆ.ಸಿ.ಎಫ್. ಎಲ್ಲಾ ರೀತಿಯ ಸಹಾಯ ಒದಗಿಸಿ ಮಾನವೀಯತೆ ಮೆರೆದಿದೆ.

- Advertisement -

ಒಂದೂವರೆ ವರ್ಷಗಳ ಹಿಂದೆ ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪನಿಯೊಂದಕ್ಕೆ ಉದ್ಯೊಗ ನಿಮಿತ್ತ ಆಗಮಿಸಿದ್ದ ಕೊಲ್ಕತ್ತಾ ನಿವಾಸಿಗಳಾದ ಶದಬ್ ಇಮಾಮ್ ಹಾಗೂ ಹಸನ್ ಅಬ್ಬಾಸ್ ಎಂಬವರಿಗೆ ಕಂಪನಿಯು ಈವರೆಗೆ ಯಾವುದೇ ಉದ್ಯೊಗ ಪರವಾನಿಗೆಯೂ ನೀಡದೆ ಮತ್ತು ತಿಂಗಳ ಸಂಬಳವೂ ಕೊಡದಿದ್ದುದರಿಂದ ಸಂಕಷ್ಟ ಎದುರಾಗಿತ್ತು.

ಹೀಗಾಗಿ ದೈನಂದಿನ ಖರ್ಚಿಗಾಗಿಯೂ ಪರದಾಡುತ್ತಿದ್ದ ಶದಬ್ ಮತ್ತು ಅಬ್ಬಾಸ್ ಅವರ ಕಷ್ಟದ  ಪರಿಸ್ಥಿತಿಯನ್ನು ಕಂಡ ಕೆ.ಸಿ.ಎಫ್. ಕಾರ್ಯಕರ್ತ ಅಬ್ದುಲ್ ಸತ್ತಾರ್ ಉಚ್ಚಿಲ ಎಂಬುವವರು ಸಮಿತಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ಸಂಕಷ್ಟದಲ್ಲಿದ್ದ ಶದಬ್ ಮತ್ತು ಅಬ್ಬಾಸ್ ಗೆ ಬೇಕಾದ ಎಲ್ಲಾ ರೀತಿಯ ದೈನಂದಿನ ರೇಷನ್ ವ್ಯವಸ್ಥೆಗಳನ್ನು ಏರ್ಪಡಿಸಲಾಯಿತು. ಅದೇ ರೀತಿ ಸೌದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಲಯವು ಅನುಕೂಲಕರ ತೀರ್ಪನ್ನು ನೀಡಿ ಸಹಕರಿಸಿದೆ.

- Advertisement -

ನಂತರ  ಅವರಿಗೆ ಊರಿಗೆ ಹೋಗಲು ಬೇಕಾದ ಎಕ್ಸಿಟ್ ವೀಸಾಕ್ಕೆ ಕೂಡ ಸಹಕಾರ ನೀಡಿತ್ತು. ಕೆ.ಸಿ.ಎಫ್ ದಮ್ಮಾಮ್ ಝೋನ್ ಹಾಗೂ ಕೋಬರ್ ಸೆಕ್ಟರ್ ಸಮಿತಿ ವತಿಯಿಂದ ಊರಿಗೆ ಹೋಗಲು ಪ್ರಯಾಣದ ಖರ್ಚನ್ನು ಮತ್ತು ಟಿಕೇಟ್ ನೀಡಿ ಅವರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು.

ಈ ಸಂದರ್ಭದಲ್ಲಿ ಅವರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲು ಕಾರ್ಯಚರಿಸಿದ ಕೆ.ಸಿ.ಎಫ್. ರಾಷ್ಟ್ರೀಯ ಸಾಂತ್ವನ ಚೇರ್ಮನ್ ಮುಹಮ್ಮದ್ ಮಲೆಬೆಟ್ಟು, ಕೋಬರ್ ಸೆಕ್ಟರ್ ಸಾಂತ್ವನ ಕನ್ವೀನರ್ ಶರೀಫ್ ಪೂಂಜಾಲ್ ಕಟ್ಟೆ, ಅದೇ ರೀತಿ ಇತರ ಸೆಕ್ಟರ್ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.

Join Whatsapp