ಡಿಸಿಸಿ ಬ್ಯಾಂಕ್‌ಗೆ ವಂಚನೆ| ಬರೋಬ್ಬರಿ 20 ವರ್ಷಗಳ ಬಳಿಕ ಶಿಕ್ಷೆ ವಿಧಿಸಿದ ನ್ಯಾಯಾಲಯ!

Prasthutha|

ತುಮಕೂರು: ಡಿಸಿಸಿ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ 20 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, ಡಿಸಿಸಿ ಬ್ಯಾಂಕ್​ ನೌಕರ ಅಶ್ವತ್ಥ ನಾರಾಯಣಗೆ 9 ವರ್ಷ, ಗ್ರಾಹಕರಾದ ಶಾಂತಲಕ್ಷ್ಮಮ್ಮ ಹಾಗೂ ಬಶೀರ್​​ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಶೀರ್​ ಅಹಮದ್​​ ಆದೇಶ ಹೊರಡಿಸಿದ್ದಾರೆ.

- Advertisement -

ಡಿಸಿಸಿ ಬ್ಯಾಂಕ್​ನಲ್ಲಿ ಡಿಡಿ ಪುಸ್ತಕ ವಿತರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಶ್ವತ್ಥ ನಾರಾಯಣ 1999ರಲ್ಲಿ ಡಿಡಿ ಪುಸ್ತಕ ಕಳವು ಮಾಡಿ ಶಾಂತ ಲಕ್ಷ್ಮಮ್ಮ ಹಾಗೂ ಬಶೀರ್​ಗೆ 34.85 ಲಕ್ಷ ರೂಪಾಯಿ ನೀಡುವ ಮೂಲಕ ಬ್ಯಾಂಕ್ ಗೆ ವಂಚಿಸಿದ್ದರು.  ಪ್ರಕರಣಕ್ಕೆ ಸಂಬಂಧಿಸಿದಂತೆ 2001ರಲ್ಲಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು. ಸುದೀರ್ಘ 20 ವರ್ಷಗಳ ಕಾಲ ನಡೆದಿದ್ದ ವಾದ ವಿವಾದದಲ್ಲಿ ಕೊನೆಗೂ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.



Join Whatsapp