ಮುಸ್ಲಿಮ್ ನಾಯಕರ ಬೆಳವಣಿಗೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ | ಅಸದುದ್ದೀನ್ ಉವೈಸಿ

Prasthutha|

ಬೆಳಗಾವಿ: ದೇಶದಲ್ಲಿ ಮುಸ್ಲಿಮ್ ನಾಯಕರು ಬೆಳೆಯಬಾರದೆಂದು ಕಾಂಗ್ರೆಸ್ ಪಕ್ಷ ಬಯಸುತ್ತಿದ್ದು, ಭಾರತದ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರಿಗೆ ಅಧಿಕಾರದ ಹಕ್ಕು ಸಿಗಬೇಕು. ಅದಕ್ಕಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು” ಎಂದು ಎಐಎಂಐಎಂ ಮುಖಂಡ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಬಹಳಷ್ಟು ಕಾನೂನುಗಳಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಬಿಜೆಪಿಗೆ ಪ್ರತಿಯೊಂದು ಕಾನೂನು ರಚಿಸಲು ಕಾಂಗ್ರೆಸ್ ಪರೋಕ್ಷವಾಗಿ ಸಾಥ್ ಕೊಡುತ್ತಿದ್ದು, ಸಂಸತ್ ನಲ್ಲಿ ಅನೇಕ ಸಲ ನಾನು ವಿರೋಧಿಸಿದ್ದೇನೆ. ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕು. ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ” ಎಂದರು.

- Advertisement -

ಇನ್ನು ಮುಸ್ಲಿಮರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿಯಾಗಲಿದ್ದು, ದೇಶದಲ್ಲಿ ಮುಸ್ಲಿಮ್ ನಾಯಕರು ಯಾರಿದ್ದಾರೆ ಹೇಳಲಿ, ನಾನಂತೂ ಗಲ್ಲಿ ಲೀಡರ್. ನಾನು ಬೇಡ, ನನ್ನ ಬಿಟ್ಟು ಬೇರೆ ಯಾರು ಇದ್ದಾರೆ ಹೇಳಲಿ. ಮುಸ್ಲಿಮರನ್ನು ಹೊರತು ಪಡಿಸಿ ಎಲ್ಲ ಜಾತಿಯ ನಾಯಕರು ಇದ್ದಾರೆ” ಎಂದು ಹೇಳಿದ್ದಾರೆ.

- Advertisement -