ಬೊಗ್ತುಯಿ ಹಿಂಸೆ ಸಾವು ಪ್ರಕರಣ: ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಮೊಕದ್ದಮೆ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬೀರ್ ಭೂಮ್ ಜಿಲ್ಲೆಯ ಬೊಗ್ತುಯಿ ಗ್ರಾಮದಲ್ಲಿ ನಡೆದಿದ್ದ ಗಲಭೆಯ ಆರೋಪಿ ಲಾಲೊನ್ ಶೇಖ್ ಸಿಬಿಐ ವಶದಲ್ಲಿ ಸೋಮವಾರ ಸಾವಿಗೀಡಾಗಿದ್ದು, ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

- Advertisement -

ಸಿಬಿಐ ಕಸ್ಟಡಿಯಲ್ಲಿ ನಡೆದ ಸಾವು ಆತ್ಮಹತ್ಯೆ ಎಂದು ಸಿಬಿಐನವರು ಹೇಳಿದ್ದಾರೆ. ಡಿಸೆಂಬರ್ 14ರ ಬುಧವಾರ ಪಶ್ಚಿಮ ಬಂಗಾಳದ ಪೊಲೀಸರು ಸಿಬಿಐ ಅಧಿಕಾರಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.

ಈ ವರ್ಷದ ಆದಿಯಲ್ಲಿ ಬೊಗ್ತುಯಿ ಗ್ರಾಮದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಎಂದು ಸಿಬಿಐ ಲಾಲೊನ್ ಶೇಖ್ ರನ್ನು ಹೆಸರಿಸಿತ್ತು. ವಿಚಾರಣೆ ವೇಳೆ ಲಾಲೊನ್ ಶೇಖ್ ಸೋಮವಾರ ಸಿಬಿಐ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾರೆ.

- Advertisement -

ಲಾಲೊನ್ ಶೇಖ್ ಕೊಲೆಗಾರರು ಎಂದು ಸಿಬಿಐನ ಹಿರಿಯ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸರು ಎಫ್’ಐಆರ್ ಸಲ್ಲಿಸಿದ್ದಾರೆ.

ಈ ವರ್ಷದ ಮಾರ್ಚ್ ತಿಂಗಳ ಬೊಗ್ತುಯಿ ಹಿಂಸಾಚಾರದಲ್ಲಿ 10 ಜನರು ಸಾವಿಗೀಡಾಗಿದ್ದರು. ಎಂಟು ತಿಂಗಳ ಬಳಿಕ ಲಾಲೊನ್ ಶೇಖ್ ರನ್ನು ಸಿಬಿಐನವರು ಜಾರ್ಖಂಡ್ ನಲ್ಲಿ ಡಿಸೆಂಬರ್ 4ರಂದು ಬಂಧಿಸಿದ್ದರು.

Join Whatsapp