ಸಾಮೂಹಿಕ ಹತ್ಯೆ ಕುರಿತ ಜಾಗತಿಕ ವರದಿ| ಭಾರತಕ್ಕೆ ಎಂಟನೇ ಸ್ಥಾನ!

Prasthutha|

►ಚೀನಾ, ಸಿರಿಯಾ, ಇರಾಕ್, ಇರಾನ್ ಗಿಂತಲೂ ಅಪಾಯಕಾರಿ ದೇಶ ಭಾರತ

- Advertisement -

ನ್ಯೂಯಾರ್ಕ್: ಅಮೆರಿಕ ಸಾಮೂಹಿಕ ಹತ್ಯೆಗಳ ಕುರಿತು ವರದಿ ತಯಾರಿಸಿದ್ದು, 30 ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಸ್ಥಾನ ಆತಂಕ ಹುಟ್ಟಿಸುವಂತಿದೆ.

ಅಮೆರಿಕದ ʼಅರ್ಲಿ ವಾರ್ನಿಂಗ್‌ ಪ್ರಾಜೆಕ್ಟ್ʼ‌ (Early Warning Project-EWP) ಪ್ರಕಟಿಸಿದ ವರದಿಯಲ್ಲಿ ಭಾರತವು 8ನೇ ಸ್ಥಾನ ಪಡೆದಿದ್ದು, ಆತಂಕ ಸೃಷ್ಟಿಸಿದೆ. ಸಿರಿಯಾ 11ನೇ ಸ್ಥಾನ ಪಡೆದರೆ, ಇರಾಕ್‌ 12, ಚೀನಾ 23 ಹಾಗೂ ಇರಾನ್‌ 30ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತ ಉತ್ತಮ ಸ್ಥಿತಿಯನ್ನು ಹೊಂದಿವೆ. ಹಾಗಾಗಿ, ಸಾಮೂಹಿಕ ಹತ್ಯೆ ವಿಚಾರದಲ್ಲಿ ಭಾರತದ ಪರಿಸ್ಥಿತಿ ಶೋಚನೀಯವಾಗಿದೆ.

- Advertisement -

ಇದರಲ್ಲಿ ಪಾಕಿಸ್ತಾನ ಮೊದಲ, ಯೆಮೆನ್‌ ಹಾಗೂ ಮ್ಯಾನ್ಮಾರ್‌ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

ಸಾಮೂಹಿಕ ಹತ್ಯೆ, ಜನರ ಸುರಕ್ಷತೆಗೆ ಧಕ್ಕೆ, ಮಾನವ ಹಕ್ಕುಗಳ ಸ್ಥಿತಿಗತಿ ಆಧರಿಸಿ ಇಡಬ್ಲ್ಯೂಪಿ ಸಂಸ್ಥೆಯು 30 ರಾಷ್ಟ್ರಗಳ ಪಟ್ಟಿ ತಯಾರಿಸಿದೆ.



Join Whatsapp