‘ಬಿಜೆಪಿಯಲ್ಲಿ ನನಗೂ ಸ್ಥಾನ ಕೊಡುವಿರಾ?’| ಫ್ಲೆಕ್ಸ್ ಹಿಡಿದು ನಿಂತ ರೌಡಿ ಶೀಟರ್!

Prasthutha|

ಮೈಸೂರು: ರೌಡಿ ಶೀಟರ್ ಆಗಿ ಗುರುತಿಸಿಕೊಂಡಿರುವ ವ್ಯಕ್ತಿ ‘ಬಿಜೆಪಿಗರೇ, ನಾನೂ ರೌಡಿ ಶೀಟರ್, ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?’ ಎಂದು ಸಾರ್ವಜನಿಕವಾಗಿ ಫ್ಲೆಕ್ಸ್ ಹಿಡಿದು ನಿಂತು ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಾನೆ.

- Advertisement -

ಮಂಜು ಅಲಿಯಾಸ್ ಪಾನಿಪುರಿ ಮಂಜ ಎನ್ನುವ ರೌಡಿ ಶೀಟರ್ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಎದುರು ಸಾರ್ವಜನಿಕವಾಗಿ ಫ್ಲೆಕ್ಸ್ ಹಿಡಿದು ನಿಂತು ತನ್ನನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಬಿಜೆಪಿಗೆ ಕೇಳಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಬಿಜೆಪಿಗರು ರೌಡಿ ಶೀಟರ್ಗಳು ಸೇರ್ಪಡೆಯಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ವಿರೋಧ ಪಕ್ಷಗಳಿಗೆ ‘ರೌಡಿ ಶೀಟರ್ ಪಾಲಿಟಿಕ್ಸ್’ ಹೊಸ ಅಸ್ತ್ರವಾಗಿ ದೊರಕಿದೆ.

ಪಾನಿಪುರಿ ಮಂಜ ಹಿಡಿದಿದ್ದ ಬ್ಯಾನರ್ನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಚಿತ್ರ ಕಂಡುಬಂದಿದೆ.

Join Whatsapp