ನೂತನ ಮುಖ್ಯಮಂತ್ರಿ ಪಟ್ಟಿಯಲ್ಲಿ ನಳಿನ್ ಸೇರಿ ನಾಲ್ವರ ಹೆಸರು ?

Prasthutha|

► ಇಂದೇ ಅಧಿಕೃತ ಆದೇಶ ಸಾಧ್ಯತೆ

- Advertisement -

ಬೆಂಗಳೂರು : ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಿ ಎಸ್ ಯಡಿಯೂರಪ್ಪ ಬಳಿಕ ಕರ್ನಾಟಕದ ನೂತನ ಮುಖ್ಯಮಂತ್ರಿಯ ಆಯ್ಕೆಗೆ ಸದ್ದಿಲ್ಲದೆ ಕಸರತ್ತು ನಡೆಯುತ್ತಿದೆ. ಸಿಎಂ ಪಟ್ಟದ ಗದ್ದುಗೇರಲು ಒಬ್ಬರ ಹಿಂದೆ ಒಬ್ಬರಂತೆ ಆಕಾಂಕ್ಷಿ ನಾಯಕರ ಪ್ರವಾಸ, ಚಟುವಟಿಕೆಗಳು ತುಸು ಚುರುಕುಗೊಂಡಿದೆ.

ನೂತನ ಮುಖ್ಯಮಂತ್ರಿಯ ರೇಸ್ ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮುರುಗೇಶ್ ನಿರಾಣಿ , ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್ ಸೇರಿದಂತೆ ನಾಲ್ವರ ಹೆಸರು ಹೈಕಮಾಂಡ್ ಅಂಗಳದಲ್ಲಿ ಇದೆ ಎನ್ನಲಾಗಿದ್ದು, ಆದರೆ ಇನ್ನೂ ಬಿಜೆಪಿ ಹೈಕಮಾಂಡ್ ಈಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಹೈಕಮಾಂಡ್ ಆಯ್ಕೆಗೊಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ .

Join Whatsapp