ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಗೆ ಕೊರೊನಾ ಪಾಸಿಟಿವ್

Prasthutha|

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್‌ ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಅವರಿಗೆ ಪ್ರತ್ಯೇಕವಾಗಿರಲು ವೈದ್ಯರು ಸಲಹೆ ನೀಡಿದ್ದಾರೆ.

‘ನಾನು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ವರದಿ ಬಂದಿದೆ. ನಾನು ಚೆನ್ನಾಗಿದ್ದೇನೆ, ನನಗೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಪ್ರತ್ಯೇಕವಾಗಿದ್ದೇನೆ.  ಆದ್ದರಿಂದ ಕಳೆದ ಕೆಲವು ದಿನಗಳಲ್ಲಿ ನನ್ನ ಭೇಟಿಗೆ ಬಂದಿರುವವರು, ದಯವಿಟ್ಟು ಜಾಗ್ರತೆವಹಿಸಿ ನಿಮ್ಮ ಕೋವಿಡ್‌ ಪರೀಕ್ಷೆ ತೆಗೆದುಕೊಳ್ಳಿ. ಎಲ್ಲರು ಆರೋಗ್ಯವಾಗಿ ಎಂದು ಹಾರೈಸುತ್ತೇನೆ’ ಎಂದು ತಿರಥ್ ಸಿಂಗ್ ರಾವತ್ ಟ್ವೀಟ್ ಮಾಡಿದ್ದಾರೆ.

- Advertisement -