ಸೌದಿ ಅರೇಬಿಯಾದ ಜಿಝಾನ್ ನಲ್ಲಿ ಮೃತಪಟ್ಟ ತೊಕ್ಕೊಟ್ಟು ನಿವಾಸಿ ರೊನಾಲ್ಡ್ ಡಿಸೋಜ ಮೃತದೇಹ ತಾಯ್ನಾಡಿಗೆ ರವಾನಿಸಲು ಇಂಡಿಯನ್ ಸೋಷಿಯಲ್ ಫೋರಂ (ISF) ತಯಾರಿ

Prasthutha|

ಜಿಝಾನ್ : ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್ ನಲ್ಲಿ ಓಸೋಲ್ ಅಲ್ ಬನ್ನಾ ಎಂಬ ಕಂಪೆನಿಯಲ್ಲಿ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದ ದ.ಕ. ಜಿಲ್ಲೆಯ ಉಳ್ಳಾಲ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ರೊನಾಲ್ಡ್ ಡಿಸೋಜ,ಸಂತೋಷ್ ನಗರ  ಎಂಬವರು ದಿನಾಂಕ 19.03.2021 ರಂದು ತಾವು ವಾಸ್ತವ್ಯವಿರುವ ಕಂಪೆನಿಯ ರೂಮಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಲ್ ಬನ್ನಾ ಕಂಪೆನಿಯವರು  ಈ ಬಗ್ಗೆ ಮೃತರ ಮನೆಯವರಿಗೆ ಮಾಹಿತಿ ನೀಡುವ ಸಲುವಾಗಿ ಯಾವುದೇ ರೀತಿಯ ಸಂಪರ್ಕ ದೊರಕದೆ ಹೋದಾಗ ಕೊನೆಯ ಪ್ರಯತ್ನವಾಗಿ ಇವರನ್ನು ಸೌದಿ ಅರೇಬಿಯಾಗೆ ಕಳುಹಿಸಿದ ಮುಂಬಯಿಯ ಏಜೆಂಟರಿಗೆ ಮಾಹಿತಿ ನೀಡಿದರು. ಅವರು ತಮ್ಮ ಬಳಿ ಲಭ್ಯವಿರುವ ಮಂಗಳೂರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಮೃತರ ಬಗ್ಗೆ ಮಾಹಿತಿ ಹರಿಯಬಿಟ್ಚಿದ್ದರು.

- Advertisement -

ಇದರ ಮಧ್ಯೆ ಜಿಝಾನ್ ನ ದರ್ಬ್ ನಲ್ಲಿರುವ ಸಿದ್ದೀಕ್ ಉಳ್ಳಾಲ ರವರ ಮೂಲಕ  ಇಂಡಿಯನ್ ಸೋಶಿಯಲ್ ಫೋರಂ (ISF) ಅಸೀರ್ ವಲಯ ಸಂಚಾಲಕರಾದ GK ಸಲೀಂ ಗುರುವಾಯನಕೆರೆ ಯವರನ್ನು  ಮೃತರ ಮನೆಯವರು ಸಂಪರ್ಕಿಸಿ ಅಲ್ಲಿಂದ ಮೃತರ ಎಲ್ಲಾ ಮಾಹಿತಿಗಳನ್ನು ನೀಡಿದ್ದರು. ಮೃತರ  ಪಾಸ್ ಪೋರ್ಟ್ ಹಾಗೂ ID ದಾಖಲೆಗಳ ಮೂಲಕ ಹೊರಟ ISF ಜಿಝಾನ್ ಹಾಗೂ ಅಬೂಅರೀಸ್ ತಂಡವು ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ ಕೊನೆಯದಾಗಿ ಅಬೂ ಅರೀಸ್ ನ ಕಿಂಗ್ ಫಹಾದ್ ಅಸ್ಪತ್ರೆಯಲ್ಲಿ ಮೃತದೇಹ ಇರುವುದು ದೃಢಪಡಿಸಿದರು. ಮೃತ ದೇಹವಿರುವ ಅಬೂಅರೀಸ್ ನ ಕಿಂಗ್ ಫಹಾದ್ ಅಸ್ಪತ್ರೆಗೆ ಹಾಗೂ ಅಲ್ ಬನ್ನಾನ್ ಕಂಪೆನಿಯ ಮುಖ್ಯಸ್ಥ ರೊಂದಿಗೆ ಭೇಟಿ ಮಾಡಿದ  GK.ಸಲೀಂ ಗುರುವಾಯನಕೆರೆ ಹಾಗೂ ಸಿದ್ದೀಕ್ ಉಳ್ಳಾಲರವರು ಮೃತದೇಹವನ್ನು ತಾಯ್ನಾಡಿಗೆ ಶೀಘ್ರವಾಗಿ ಕಳುಹಿಸಲು ಬೇಕಾದ ಎಲ್ಲಾ ಪೂರಕ ದಾಖಲೆಗಳನ್ನು ಅಲ್ ಬನ್ನಾ ಕಂಪೆನಿಗೆ ಒದಗಿಸಲು ಹಾಗೂ ಸೌದಿ ಅರೇಬಿಯಾದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷರಾದ ಹನೀಫ್ ಮಂಜೇಶ್ವರ ವರವರೊಂದಿಗೆ ಸಹಕರಿಸಲಿದ್ದಾರೆ. ಆದಷ್ಟು ಶೀಘ್ರ ಮೃತದೇಹ ತಾಯ್ನಾಡಿಗೆ ಕಳುಹಿಸುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ

Join Whatsapp