ತ್ರಿವರ್ಣ ಧ್ವಜ, ಭಾರತದ ನಕ್ಷೆ ಇರುವ ಕೇಕ್‌ ಕತ್ತರಿಸುವುದು ‘ಅವಮಾನ’ವಲ್ಲ : ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

Prasthutha: March 22, 2021

ಚೆನ್ನೈ : ತ್ರಿವರ್ಣ ಧ್ವಜ, ಅಶೋಕ ಚಕ್ರ ಮತ್ತು ಭಾರತದ ನಕ್ಷೆ ಇರುವ ಕೇಕ್ ಕತ್ತರಿಸುವುದು ‘ಅವಮಾನ’ವಲ್ಲವೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರಿದ್ದ ನ್ಯಾಯಾಪೀಠ  ರಾಷ್ಟ್ರೀಯ ಗೌರವ ಕಾಯಿದೆ 1971ರ ಅಡಿಯಲ್ಲಿ ‘ಅವಮಾನ’ ವಲ್ಲವೆಂದು ತೀರ್ಪು ನೀಡಿದೆ.

“ಭಾರತದಂತಹ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಬಹಳ ಮಹತ್ವದ್ದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ದೇಶ ಭಕ್ತಿ ಎನ್ನುವುದು ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳುವುದರಿಂದ ನಿರೂಪಿಸಲು ಸಾಧ್ಯವಾಗುವುದಿಲ್ಲ, ದೇಶದಲ್ಲಿ ಉತ್ತಮ ಅಡಳಿತಕ್ಕಾಗಿ ಹೋರಾಡುವವನು ಕೂಡ ದೇಶ ಭಕ್ತನಾಗಿರುತ್ತಾನೆ. ರಾಷ್ಟ್ರೀಯ ಸಂಕೇತಗಳು ದೇಶಭಕ್ತಿಗೆ ಸಮಾನಾರ್ಥಕವಲ್ಲ” ಎಂದು ಹೇಳಿರುವ ನ್ಯಾಯ ಪೀಠ 2013ರಲ್ಲಿ ಕೇಕ್ ಕತ್ತರಿಸುವ ಪ್ರಕರಣದ ಬಗ್ಗೆ ಕೊಯಮತ್ತೂರ್ ಮ್ಯಾಜಿಸ್ಟ್ರೇಟ್ ಆರಂಭಿಸಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಹಲವು ಮಹತ್ವದ ಮಾಹಿತಿಗಳನ್ನು ನೀಡಿದೆ.  

2013ರ ಕ್ರಿಸ್ ಮಸ್ ಹಬ್ಬದ ಆಚರಣೆಯೊಂದರಲ್ಲಿ ಕೊಯಮತ್ತೂರ್ ಜಿಲ್ಲಾಧಿಕಾರಿ, ಪೊಲೀಸ್ ಉಪ ಆಯುಕ್ತರು, ವಿವಿಧ ಧಾರ್ಮಿಕ ಮುಖಂಡರು, ಎನ್ ಜಿಒಗಳ ಸದಸ್ಯರು ಸೇರಿದಂತೆ 2,500 ಕ್ಕೂ ಹೆಚ್ಚು ಮಂದಿ 6×5 ಅಡಿ ಉದ್ದದ ಭಾರತದ ನಕ್ಷೆ ಮತ್ತು ಅಶೋಕ ಚಕ್ರ ಚಿಹ್ನೆಯ ಕೇಕ್ ಕತ್ತರಿಸಿ ಸೇವಿಸಿದ್ದರು. ಈ ಸಂಬಂಧ, ಡಿ.ಸೆಂಥಿಲ್ ಕುಮಾರ್ ಎಂಬುವವರು, ಕೇಕ್ ನ ವಿನ್ಯಾಸವು ಭಾರತದ ರಾಷ್ಟ್ರಧ್ವಜವನ್ನು ಪ್ರತಿನಿಧಿಸುತ್ತದೆ. ಇದಲ್ಲದೇ ಅದನ್ನು ಕತ್ತರಿಸುವುದು ಭಾರತೀಯ ರಾಷ್ಟ್ರಧ್ವಜಕ್ಕೆ ಅವಮಾನವಾಗಲಿದ್ದು, ಇದು 1971ರ ಸೆಕ್ಷನ್ 2ರ ಪ್ರಕಾರ ಅಪರಾಧವಾಗಿದೆ (ಸೆಕ್ಷನ್ 2 ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ವ್ಯಕ್ತಿಗೆ 3 ವರ್ಷಜೈಲು ಅಥವಾ ದಂಡ ಅಥವಾ ಎರಡನ್ನೂ ದಂಡವಾಗಿ ವಿಧಿಸುತ್ತದೆ) ಎಂದು ದೂರು ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ಮದ್ರಾಸ್‌ ಹೈಕೋರ್ಟ್‌ ಘಟನೆಗೆ ಸಂಬಂಧ ಪಟ್ಟಂತೆ ಹೂಡಲಾಗಿದ್ದ ಕ್ರಿಮಿನಲ್‌ ಕೇಸನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!