ಪಕ್ಷದೊಳಗೆ ಆಂತರಿಕ ಚುನಾವಣೆ ಬೇಕು : ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್

Prasthutha|

ನವದೆಹಲಿ : ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಸಬೇಕೆಂಬ ತಮ್ಮ ಬೇಡಿಕೆಯಿಂದ ತಾವು ಹಿಂದೆ ಸರಿದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ. ಪಕ್ಷದ ವಿವಿಧ ಹಂತಗಳ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರದಿದ್ದರೆ, ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪಕ್ಷದೊಳಗೆ ಬದಲಾವಣೆಗಳನ್ನು ತರಬೇಕೆಂದು ಒತ್ತಾಯಿಸಿದವರಲ್ಲಿ ಆಝಾದ್ ಕೂಡ ಒಬ್ಬರು. ಇತ್ತೀಚೆಗೆ ನಡೆದ ವಿಧಾನಸಭಾ ಮತ್ತು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಕಳಪೆ ಪ್ರದರ್ಶನ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಪಕ್ಷದೊಳಗಿನ ಹಲವರು ಟೀಕಿಸುತ್ತಿದ್ದು, ಪಕ್ಷದೊಳಗೆ ಸಮಗ್ರ ಬದಲಾವಣೆಯ ಆಗ್ರಹ ಕೇಳಿಬರುತ್ತಿದೆ.

- Advertisement -

“ಕೋವಿಡ್ 19 ಕಾರಣದಿಂದ, ಅವರಿಗೆ ಈಗ ಒಳ್ಳೆಯ ಫಲಿತಾಂಶ ತೆಗೆಯಲು ಸಾಧ್ಯವಾಗಿಲ್ಲ ಎಂಬುದಕ್ಕೆ ನಾನು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಗೆ ಕ್ಲೀನ್ ಚಿಟ್ ನೀಡುತ್ತೇನೆ. ಆದರೆ, ನಮ್ಮ ನಾಲ್ಕು ಬೇಡಿಕೆಗಳಿಂದ ನಾವು ಹಿಂದೆ ಸರಿಯುವುದಿಲ್ಲ. ರಾಷ್ಟ್ರೀಯ ಪರ್ಯಾಯ ಆಗಬೇಕಾದರೆ, ಪಕ್ಷದೊಳಗೆ ಪುನಶ್ಚೇತನ ತರಬೇಕಾದರೆ ನಮ್ಮ ನಾಯಕತ್ವ ಚುನಾವಣೆಗಳನ್ನು ನಡೆಸಬೇಕು’’ ಎಂದು ಆಝಾದ್ ಹೇಳಿದ್ದಾರೆ.

- Advertisement -