ದೆಹಲಿ ಗಲಭೆ ಕೇಸ್ | ವಿದ್ಯಾರ್ಥಿ ನಾಯಕಿ ಗುಲ್ಫಿಶಾ ಫಾತಿಮಾಗೆ ಜಾಮೀನು | ಬಿಡುಗಡೆಯಿಲ್ಲ

Prasthutha|

ನವದೆಹಲಿ : ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿದ್ಯಾರ್ಥಿ ನಾಯಕಿ ಗುಲ್ಫಿಶಾ ಫಾತಿಮಾಗೆ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ. ಆದರೆ, ಯುಎಪಿಎ ಪ್ರಕರಣವೊಂದಕ್ಕೆ ಸಂಬಂಧಿಸಿ ಆಕೆ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.

ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಜಾಮೀನು ಅರ್ಜಿ ವಿಚಾರಣೆ ಮಾಡಿ, ಫಾತಿಮಾಗೆ ಜಾಮೀನು ಮಂಜೂರು ಮಾಡಿದ್ದಾರೆ.

- Advertisement -

ಪ್ರಕರಣದಲ್ಲಿ ಸಹ ಆರೋಪಿಗಳಾದ ದೇವಾಂಗನಾ ಕಲಿತಾ ಮತ್ತು ನತಾಶ ನರ್ವಾಲ್ ಅವರಿಗೆ ಈಗಾಗಲೇ ಜಾಮೀನು ಮಂಜೂರಾಗಿರುವುದರಿಂದ, ಫಾತಿಮಾಗೂ ಜಾಮೀನು ನೀಡುವಂತೆ ವಾದಿಸಲಾಗಿತ್ತು.

- Advertisement -