ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

Prasthutha|

►”ಅಲ್ಪಸಂಖ್ಯಾತರಿಂದಾಗಿಯೇ ಕಾಂಗ್ರೆಸ್ ಇಂದು ಠೇವಣಿ ಉಳಿಸಿಕೊಂಡಿದೆ

- Advertisement -

ಅಲ್ಪಸಂಖ್ಯಾತರು ಮತ್ತು ದಲಿತರು ಎಂದು ಹೇಳುತ್ತಾ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿತು. ಅದೇ ರೀತಿಯ ಮೋಸ ಅಲ್ಪಸಂಖ್ಯಾತರಿಗೆ ಮಾಡಬೇಡಿ. ಅಲ್ಪಸಂಖ್ಯಾತರು ಇಲ್ಲದಿದ್ದರೆ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಂದಾಗಿ ಗೆಲ್ಲುತ್ತಿದೆ. ಅವರು ಬಹುಮತವಿರುವ ಕಡೆಗಳಲ್ಲಿ ಮಾತ್ರ ಗೆಲ್ಲುತ್ತಿದೆ. ಆದುದರಿಂದ ಅವರ ಕುರಿತು ನಿಜವಾದ ಕಾಳಜಿ ಕಾಂಗ್ರೆಸ್ ಗೆ ಇದ್ದರೆ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ದೆಹಲಿಯಲ್ಲಿ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅವರು ಈ ರೀತಿ ಹೇಳಿದ್ದಾರೆ

ಕಾಂಗ್ರೆಸ್ ನಲ್ಲಿ ಝಮೀರ್ ಅಹ್ಮದ್, ಸಿ ಎಂ ಇಬ್ರಾಹೀಮ್, ತನ್ವೀರ್ ಸೇಠ್ ಮುಂತಾದ ನಾಯಕರು ಇದ್ದಾರೆ. ಇವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಹೊರಡಿಸಿ. ಇಲ್ಲದಿದ್ದರೆ ನೀವು ತುಪ್ಪ ತಿಂದು ಅಲ್ಪಸಂಖ್ಯಾತರ ಮುಖಕ್ಕೆ ಸವರಿದಂತೆ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಹೊಸತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.

- Advertisement -

ಬಿಜೆಪಿಗೆ ಬಹುಮತವಿದೆ. ಆದುದರಿಂದ ಆ ಪಕ್ಷದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಮಾತ್ರವಲ್ಲ ಪಕ್ಷದ ಇತರರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅದರಲ್ಲಿ ಅಚ್ಚರಿ ಪಡುವಂತದ್ದು ಏನೂ ಇಲ್ಲ. ಆದರೆ ಕಾಂಗ್ರೆಸ್ಸಿಗೆ ಬಹುಮತವಿಲ್ಲದಿದ್ದರೂ ಅಲ್ಲಿ ಮುಖ್ಯಮಂತ್ರಿಗಾಗಿ ಒಳಜಗಳ ನಡೆಯುತ್ತಿದೆ ಎಂದು ಸಿ ಟಿ ರವಿ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದ ಕುರಿತಂತೆ ಲೇವಡಿ ಮಾಡಿದ್ದಾರೆ.

Join Whatsapp