ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ: ಗೃಹ ಸಚಿವರಿಗೆ ಕಾಂಗ್ರೆಸ್ ಪ್ರಶ್ನೆ

Prasthutha|

ಕೊಡಗು: ಕೊಡಗಿನಲ್ಲಿ ಬಜರಂಗದಳವು ಶೌರ್ಯ ಪ್ರಶಿಕ್ಷಣದ ನೆಪದಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ತ್ರಿಶೂಲ ದೀಕ್ಷೆ ನೀಡಿರುವ ಕುರಿತಾಗಿ ಗೃಹ ಸಚಿವರನ್ನು ತರಾಟೆಗೆ ತೆಗೆದಿರುವ ರಾಜ್ಯ ಕಾಂಗ್ರೆಸ್, ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೀವು ನೋಡಿಕೊಂಡು ಸುಮ್ಮನಿದ್ದೀರಾ ಎಂದು ಪ್ರಶ್ನಿಸಿದೆ.

- Advertisement -


ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಯಾವ ಸಂಘಟನೆ? ಅದಕ್ಕೆ ಅನುಮತಿ ಕೊಟ್ಟವರು ಯಾರು? ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ? ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.


ಬಜರಂಗದಳವು ಕಳೆದ ಎರಡು ದಿನಗಳ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ಧೀಕ್ಷೆ ನೀಡುವ ಫೋಟೋ ವೈರಲ್ ಆಗಿತ್ತು. ತರಬೇತಿ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಮುಖಂಡ ಸಿಟಿ ರವಿ, ಪ್ರತೀ ವರ್ಷವೂ ಆತ್ಮ ರಕ್ಷಣೆಗಾಗಿ ತರಬೇತಿಯನ್ನು ನೀಡಲಾಗುತ್ತದೆ. ಇದು ಹೊಸದಾಗಿ ಶುರುವಾಗಿಲ್ಲ, ಇದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿ ಹೇಳಿಕೆ ನೀಡಿದ್ದರು.

Join Whatsapp