ಅಸ್ಸಾಮ್ ನಲ್ಲಿ ಮುಸ್ಲಿಮರ ಹತ್ಯೆ । ಪೊಲೀಸರ ನಡೆಯನ್ನು ಸಮರ್ಥಿಸಿದ ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ ಕಾಂಗ್ರೆಸ್ ಸಂಸದ

Prasthutha|

ಗುವಾಹಟಿ: ಸೆಪ್ಟೆಂಬರ್ ನಲ್ಲಿ ಅಸ್ಸಾಮ್ ನ ದರ್ರಾಂಗ್ ಜಿಲ್ಲೆಯಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ವೇಳೆ ಪೊಲೀಸರು ಇಬ್ಬರು ಮುಸ್ಲಿಮರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ನಡೆಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ದೂರು ದಾಖಲಿಸಿದ್ದಾರೆ.

- Advertisement -

ಅಸ್ಸಾಮ್ ನ ಮೊರಿಗಾಂವ್ ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಭಾಷಣ ಮಾತನಾಡಿದ ಶರ್ಮಾ, 1983 ರ ಹತ್ಯಾಕಾಂಡ ಮತ್ತು ಪ್ರತಿಭಟನೆಗಳಿಗೆ ಪ್ರತೀಕಾರವಾಗಿ ದರ್ರಾಂಗ್ ನಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸಲಾಗಿತ್ತು ಮತ್ತು ವಿರೋಧಿಸಿದವರ ಮೇಲೆ ಗುಂಡಿಕ್ಕಿ ಸೇಡು ತೀರಿಸಲಾಗಿತ್ತು ಎಂಬ ಹೇಳಿಕೆಯ ವಿರುದ್ಧ ದೂರು ದಾಖಲಾಗಿದೆ.

1983 ರ ಗೋರ್ಖುತಿ ಎಂಬಲ್ಲಿನ ದುರದೃಷ್ಟಕರ ಘಟನೆಗಳನ್ನು ಸೇಡಿನ ಕ್ರಮ ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ರಾಷ್ಟ್ರದ ನಿರ್ದಿಷ್ಟ ಸಮುದಾಯದ ವಿರುದ್ಧ ಗಲಭೆಗಳಿಗೆ ಪ್ರಚೋದಿಸಲಾಗುತ್ತಿದೆ. ಇಂತಹ ಹೇಳಿಕೆಗಳ ಮೂಲಕ ಅಸ್ಸಾಮ್ ಮುಖ್ಯಮಂತ್ರಿಗಳು, ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ದ್ವೇಷ ಮತ್ತು ಹಿಂಸಾಚಾರವನ್ನು ಉಂಟು ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಖಲೀಕ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಈ ಮಧ್ಯೆ ಶರ್ಮಾ ವಿರುದ್ಧ ಐಪಿಸಿ ಸೆಕ್ಷನ್ 153 ಮತ್ತು 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಖಲೀಕ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

Join Whatsapp