ತುಮಕೂರು: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ವಿರುದ್ಧ ಸಡ್ಡು ಹೊಡೆದ ಮಹಿಳೆಯರು

Prasthutha|

ಬೆಂಗಳೂರು: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಸ್ಥಳದಲ್ಲಿದ್ದ ಮಹಿಳೆಯರು ಸೆಟೆದು ನಿಂತು ಹೋರಾಟ ನಡೆಸಿದ ಘಟನೆ ಕುಣಿಗಲ್ ನಿಂದ ವರದಿಯಾಗಿದೆ.

- Advertisement -

ಕ್ರಿಸ್ಮಸ್ ಆಚರಣೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಸಂಘಪರಿವಾರದ ಕಾರ್ಯಕರ್ತರು ಹಿಂದೂಗಳಂತೆ ನೀವು ಯಾಕೆ ಸಿಂಧೂರ ಧರಿಸುತ್ತಿಲ್ಲ ಮತ್ತು ಕ್ರಿಸ್ಮಸ್ ಯಾಕೆ ಆಚರಿಸುತ್ತಿದ್ದೀರಿ ಎಂದು ಮಹಿಳೆಯರನ್ನು ಗದರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವೇಳೆ ಧೃತಿಗೆಡದ ಮಹಿಳೆಯರು ನಾವು ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆಯುಳ್ಳವರು ಮತ್ತು ಕ್ರಿಸ್ಮಸ್ ಆಚರಣೆ ಮಾಡಲು ಉತ್ಸುಕರಾಗಿದ್ದೇವೆ ಎಂದು ಪ್ರತಿಕ್ರಿಯಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp