ಕೆಜಿಎಫ್ ಬಾಬು ಸಹೋದರಿ ಮನೆಯಲ್ಲಿ ಅಗ್ನಿ ಅವಘಡ

Prasthutha|

ಬೆಂಗಳೂರು: ಕೆಜಿಎಫ್ ಬಾಬು ಅವರ ಸಹೋದರಿ ಮನೆಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

- Advertisement -


ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯಲ್ಲಿರುವ ಕೆ.ಎಸ್.ಗಾರ್ಡನ್ ನಲ್ಲಿರುವ ಬಾಬು ಸಹೋದರಿ ಶಾಹೀನ್ ತಾಜ್ ವಾಸವಿದ್ದ ಮನೆಯ ಮುಂದೆ ಇದ್ದ ಚಪ್ಪಲಿ ಸ್ಟ್ಯಾಂಡ್ ಬಳಿ ಕಾಣಿಸಿಕೊಂಡ ಬೆಂಕಿ ನಂತರ ಮನೆಯ ಒಳಭಾಗಕ್ಕೂ ಆವರಿಸಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಕೆಜಿಎಫ್ ಬಾಬು ‘ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 500 ಮನೆಗಳನ್ನ ಕಟ್ಟಿಸಲು ಮುಂದಾಗಿದ್ದೆ. ಸಿಂಹದ ಬಾಯಿಗೆ ಬಂದು ನಿಮ್ಮಣ್ಣ ನಿಂತಿದ್ದಾರೆ ಎಂದು ಆರ್.ವಿ ಯುವರಾಜ್ ನನ್ನ ತಂಗಿಗೆ ಬಂದು ಧಮ್ಕಿ ಹಾಕಿದ್ದಾರೆ. ನಿನ್ನೆ ಒಂದಷ್ಟು ಜನ ಬಂದು ಬೆಂಕಿ ಹಾಕಿದ್ದಾರೆ. ನನ್ನ ಕೊಲೆ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೆ ನ್ಯಾಯ ಬೇಕಾಗಿದೆ ಎಂದು ಹೇಳಿದ್ದಾರೆ.