ಕಾಂಗ್ರೆಸ್ ಮುಕ್ತ ಕರ್ನಾಟಕ ‘ಗ್ರಾಮ ಸ್ವರಾಜ್ಯ ಸಮಾವೇಶದ ಉದ್ದೇಶ: ನಳಿನ್ ಕುಮಾರ್

Prasthutha|

ಉಡುಪಿ: ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವುದೇ ಗ್ರಾಮ ಸ್ವರಾಜ್ ಸಮಾವೇಶದ ಮುಖ್ಯ ಉದ್ದೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಿನ್ನೆ ಉಡುಪಿಯ ಎಲ್.ವಿ.ಟಿ ಬಳಿ ಇರುವ ಅಮೃತ್ ಗಾರ್ಡನ್ ನಲ್ಲಿಎರಡನೇ ಗ್ರಾಮ ಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, “ಗ್ರಾಮ ಸ್ವರಾಜ್ ಸಮಾವೇಶದ ಪ್ರಾಥಮಿಕ ಉದ್ದೇಶ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿದೆ. 80 ಶೇಕಡಾ ಗ್ರಾಮ ಪಂಚಾಯತ್ ನಮ್ಮ ಗುರಿಯಾಗಿದೆ. ಸಾಮಾನ್ಯ ಪಕ್ಷ ಕಾರ್ಯಕರ್ತ ಬಲಿಷ್ಠ ನಾಯಕನಾಗಬಹುದು. ಇದು ಪಂಚಾಯತ್ ಮಟ್ಟದಲ್ಲಿ ಮಾತ್ರವೇ ಸಾಧ್ಯ” ಎಂದು ನಳಿನ್ ಕುಮಾರ್ ಹೇಳಿದರು.

- Advertisement -

ಪಂಚಾಯತ್ ಚುನಾವಣೆಗಾಗಿ  ತಿಂಗಳ ಹಿಂದೆಯೇ ಸಿದ್ಧತೆಗಳು ಪ್ರಾರಂಭಗೊಂಡಿದೆ. ಸ್ಥಳೀಯ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಪಂಚ ಸೂತ್ರ ಮತ್ತು ಪಂಚ ರತ್ನಗಳನ್ನು ಆರಿಸಿಕೊಂಡಿದೆ. ಗಾಂಧೀಜಿ ಜಾತ್ಯತೀತ ರಾಷ್ಟ್ರದ ಕುರಿತು ಮಾತನಾಡಿರಲಿಲ್ಲ. ಅವರು ಗ್ರಾಮಗಳ ಅಭಿವೃದ್ಧಿಯೊಂದಿಗೆ ಆರಂಭವಾಗುವ ರಾಮರಾಜ್ಯದ ಕನಸು ಕಂಡಿದ್ದರು” ಎಂದು ಅವರು ಹೇಳಿದರು.

- Advertisement -