ಸಂಸ್ಥಾಪನಾ ದಿನಾಚರಣೆಯ ವೇಳೆ ಎಡವಟ್ಟು| ಕೆಳಗೆ ಬಿದ್ದ ಧ್ವಜ ಸೋನಿಯಾ ಕೈಯ್ಯಲ್ಲಿ ಜೋಪಾನ!

Prasthutha|

ಹೊಸದಿಲ್ಲಿ: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುತ್ತಿದ್ದಾಗ ದಾರ ತುಂಡಾಗಿ ಪಕ್ಷದ ತ್ರಿವರ್ಣ ಧ್ವಜ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.

- Advertisement -

ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುತ್ತಿದ್ದಾಗ ಪಕ್ಷದ ಧ್ವಜ ಕೆಳಗೆ ಬೀಳುತ್ತಿರುವ ವೀಡಿಯೋ ವ್ಯಾಪಕ ವೈರಲಾಗಿದೆ. ಧ್ವಜಾರೋಹಣ ನಡೆಸುವಾಗ ದಾರ ತುಂಡಾಗಿ ಪಕ್ಷದ ಧ್ವಜ ಕೆಳಗೆ ಬಿದ್ದಿದೆ.
ಕಾಂಗ್ರೆಸ್ ನ 137ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸರಳ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸೋನಿಯಾ ಗಾಂಧಿ ಅವರು ಧ್ವಜಾರೋಹಣ ಮಾಡುತ್ತಾ ಧ್ವಜಕ್ಕೆ ಕಟ್ಟಲಾಗಿದ್ದ ದಾರ ಎಳೆಯುತ್ತಿದ್ದರು. ಅವರಿಗೆ ಸಹಾಯ ಮಾಡಲು ಸೇವಾದಳದ ಕಾರ್ಯಕರ್ತರೊಬ್ಬರು ಜೋರಾಗಿ ಧ್ವಜಕ್ಕೆ ಕಟ್ಟಿದ್ದ ದಾರವನ್ನು ಎಳೆದಿದ್ದಾರೆ. ಇದರಿಂದ ಕಾಂಗ್ರೆಸ್ ನ ತ್ರಿವರ್ಣ ಧ್ವಜ ಕೆಳಗೆ ಬಿದ್ದಿದೆ.

- Advertisement -

ವೀಡಿಯೋ ವೀಕ್ಷಿಸಿ…

ತಕ್ಷಣ ಸಮಯ ಪ್ರಜ್ಞೆ ಮೆರೆದ ಸೋನಿಯಾ ಗಾಂಧಿ ಪಕ್ಷದ ಧ್ವಜವನ್ನು ಜೋಪಾನವಾಗಿ ಹಿಡಿದುಕೊಂಡಿದ್ದಾರೆ. ಮತ್ತೆ ಎತ್ತರದ ಕಂಬದ ಮೇಲೆ ಧ್ವಜ ಏರಿಸಿ ಆರೋಹಣ ಮಾಡಲು ಸಾಧ್ಯವಾಗದೇ ಇರುವ ಕಾರಣ ಮಡಚಿಕೊಂಡಿದ್ದ ಧ್ವಜವನ್ನು ಬಿಡಿಸಿ ಸಾಂಕೇತಿಕವಾಗಿ ಪ್ರದರ್ಶನ ಮಾಡಲಾಯಿತು. ನಂತರ ಸೇವಾದಳದ ಕಾರ್ಯಕರ್ತರು ರಾಷ್ಟ್ರ ಗೀತೆ ಗಾಯನ ಮಾಡಿ ಕಾರ್ಯಕ್ರಮ ಮುಂದುವರಿಸಿದ್ದಾರೆ.

Join Whatsapp