ಸಾಣೂರು ಸೈಂಟ್‌ ಜೋಸೆಫ್‌ ಶಾಲೆಯ ಮುಖ್ಯ ಶಿಕ್ಷಕಿ ಫೆಲ್ಸಿಯಾ ಪ್ರೆಸಿಲ್ಲಾ ಪಿರೇರಾ ಅವರಿಗೆ ಅಭಿನಂದನೆ

Prasthutha|

ಕಾರ್ಕಳ : ಸಾಣೂರು ಸೈಂಟ್‌ ಜೋಸೆಫ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 32 ವರ್ಷಗಳ ಕರ್ತವ್ಯ ನಿಭಾಯಿಸಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಫೆಲ್ಸಿಯಾ ಪ್ರೆಸಿಲ್ಲಾ ಪಿರೇರಾ ಅವರಿಗೆ ಜೂ. 29ರಂದು ಶಾಲಾ ಹಳೆ ವಿದ್ಯಾರ್ಥಿ ಸಂಘ, ಆಡಳಿತ ಮಂಡಳಿ, ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿ ವೃಂದದಿಂದ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು.

- Advertisement -

133 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಸಾಣೂರು ಸೈಂಟ್‌ ಜೋಸೆಫ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಆಡಳಿತ ಮಂಡಳಿಯವರ ನಿರ್ಧಾರದೊಂದಿಗೆ, ಈ 2023ನೇ ಸಾಲಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಇದೇ ಸಂದರ್ಭ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಅರುಣಾ, ಸ್ವಾತಿ, ಸುಮಂಗಲ ಹಾಗೂ ಪ್ರೇಮ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಸಂಚಾಲಕ ಅಲೆಕ್ಸ್‌ ಡಿಸಿಲ್ವ ಸಭಾಧ್ಯಕ್ಷತೆ ವಹಿಸಿದ್ದರು. ಸಾಣೂರು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಬಂಧಕ ಡಾ. ಮೋಹನ್‌ದಾಸ್‌, ಸಾಣೂರು ಗ್ರಾ. ಪಂ. ಅಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್‌ ಪೂಜಾರಿ, ಕಾರ್ಕಳ ತಾಲೂಕು ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಫೃಥ್ವಿರಾಜ್‌ ಬಲ್ಲಾಳ್, ಸ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಉಷಾ, ಸಿಆರ್‌ಪಿ ಜ್ಯೋತಿ, ನಿವೃತ್ತ ಶಿಕ್ಷಕ ನರಸಿಂಹ ನಾಯಕ್‌, ನಿವೃತ್ತ ಮುಖ್ಯ ಶಿಕ್ಷಕ ಶಾಂತಿರಾಜ್‌ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿನಿ ಶೆರಿಲ್ ಸ್ವಾಗತಿಸಿ, ಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿನಿ ಶರೀಟಾ ವಂದಿಸಿದರು.

Join Whatsapp