ಕಾಸರಗೋಡು ಮೂಲದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಜರ್ಮನ್ ಯುವಕ!

Prasthutha|

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಹಿಳೆಯೋರ್ವರು ಜರ್ಮನಿಯ ಯುವಕನೊಬ್ಬನಿಂದ ವಂಚನೆಗೊಳಗಾದ ಘಟನೆಯೊಂದು ವರದಿಯಾಗಿದೆ.

- Advertisement -

 ಫೇಸ್ ಬುಕ್ ಮೂಲಕ ಪರಿಚಯವಾದ ಜರ್ಮನ್ ಯುವಕ  ಕಾಞಂಗಾಡ್ ಮೂಲದ ಮಹಿಳೆಗೆ ಉಡುಗೊರೆ ಕಳುಹಿಸುವ ನೆಪದಲ್ಲಿ 8,01,400 ರೂ. ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ.

ಬರ್ಲಿನ್ ಮೂಲದ ಡಾ. ಕೆನಡಿ ನಿಕ್ ಮೂರ್ಸ್ ಎಂಬ ಫೇಸ್ ಬುಕ್ ಖಾತೆಯಿಂದ ಎರಡು ವಾರಗಳ ಹಿಂದೆ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ಮಹಿಳೆ ಉತ್ತರಿಸಿದ್ದರು.

- Advertisement -

ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಾ ಯುವಕ ನಿಮಗೆ ಒಂದು ಉಡುಗೊರೆ ನಿಡುವೆನೆಂದು ಹೇಳಿದ್ದು, ಮಹಿಳೆ ಮೊದಲು ನಿರಾಕರಿಸಿದ್ದರು. ಯುವನ ಒತ್ತಾಯಕ್ಕೆ ಮಣಿದ ಮಹಿಳೆ ಒಪ್ಪಿದ್ದಾರೆ ಎನ್ನಲಾಗಿದೆ.  

ನಂತರ ಮಹಿಳೆಯ ವಿಳಾಸವನ್ನು ಕೇಳಿದ ಯುವಕ ಉಡುಗೊರೆ ಸಿದ್ಧಪಡಿಸಿಟ್ಟಿರುವುದಾಗಿ ತಿಳಿಸಿದ್ದಾನೆ. ಬಳಿಕ ಮಹಿಳೆಗೆ ಕೊರಿಯರ್ ಕಂಪನಿಯಿಂದ ಸಂದೇಶವೊಂದು ಬಂದಿದೆ. ತಮಗೆ ಬಂದಿರುವ ಕೊರಿಯರ್ ಸ್ವೀಕರಿಸಬೇಕಾದರೆ 25,400 ರೂಪಾಯಿ ಕಳುಹಿಸುವಂತೆ ಸಂದೇಶವಾಗಿತ್ತು ಅದು. ಮಹಿಳೆ ಹಣ ಪಾವತಿಸಿದ ನಂತರ ಮತ್ತೆ ಮತ್ತೆ ಕೊರಿಯರ್ ಕಂಪನಿಯವರು ಕರೆ ಮಾಡಿ ತಮಗೆ ಭಾರಿ ಮೊತ್ತ ಲಭಿಸಲಿದೆ ಎಂದು ತಿಳಿಸಿದ್ದು, ಇನ್ನೂ 87,000 ರೂ. ಪಾವತಿಸುವಂತೆ ಹೇಳಲಾಗಿದೆ. ಅದರಂತೆ ಮಹಿಳೆ ಹಣ ನೀಡಿದ್ದಾಳೆ. ಹಲವಾರು ಬಾರಿ ಕರೆ ಮಾಡಿ ಮಹಿಳೆಯಿಂದ ಹಣ ದೋಚಲಾಗಿದೆ. ಹೀಗೆ ಮಹಿಳೆ 8,01,400 ರೂ. ಪಾವತಿಸಿದ್ದು, ನಂತರ ತಾನು ವಂಚನೆಗೊಳಗಾಗಿರುವುದಾಗಿ ಮಹಿಳೆಗೆ ಅರಿವಾಗಿದೆ.

ಈಗ ಮಹಿಳೆ ತಾನು ಪಾವತಿಸಿದ ಲಕ್ಷಾಂತರ ಹಣವನ್ನು ಮರಳಿ ಪಡೆಯುವ ಮಾರ್ಗವನ್ನು ಹುಡುಕುತ್ತಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   

Join Whatsapp