ಜಿ.ಎಸ್‍.ಟಿ ದಿನಾಚರಣೆ: ಮುಖ್ಯಮಂತ್ರಿಗಳಿಂದ ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ ಬಿಡುಗಡೆ

Prasthutha|

- Advertisement -

ಬೆಂಗಳೂರು: ಜಿಎಸ್‍ಟಿ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ ಹಾಗೂ ಮೊಬೈಲ್ ಆ್ಯಪ್‍ ಅನ್ನು ವಾಣಿಜ್ಯ ತೆರಿಗೆ ಇಲಾಖೆಯ ಆಡಳಿತದಲ್ಲಿ ಬಳಕೆ ಮಾಡುವ ಸಲುವಾಗಿ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾಯದರ್ಶಿಗಳಾದ ನಜೀರ್ ಅಹ್ಮದ್, ಗೋವಿಂದರಾಜು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

ಜಿ.ಎಸ್.ಟಿ ದಿನಾಚರಣೆ

2017 ರ ಜುಲೈ 01 ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸಿದ್ದರಿಂದ ಜುಲೈ ಒಂದರಂದು ಜಿಎಸ್‍ಟಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೊಸ ತೆರಿಗೆ ಕಾನೂನಿಗೆ ವರ್ತಕ ಸಮೂಹದಿಂದ ದೊರೆತ ಅನುಪಾಲನೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ, ತೆರಿಗೆದಾರರು ನೀಡುತ್ತಿರುವ ದೇಣಿಗೆಯನ್ನು ಗುರುತಿಸಿ, ಪ್ರಶಂಸಿಸುವ ಯೋಜನೆ ಜಿ.ಎಸ್.ಟಿ ದಿನಾಚರಣೆಯ ಧ್ಯೇಯವಾಗಿದೆ. ಬಾರತದಲ್ಲಿನ ತೆರಿಗೆ ಪದ್ದತಿಯಲ್ಲಿನ ಸರಳೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವುದರ ಮೇರೆಗೆ ಜಿ.ಎಸ್.ಟಿ ಪದ್ದತಿ ಬೀರಿದ ಪರಿಣಾಮವನ್ನು ಈ ಧ್ಯೇಯ ಎತ್ತಿ ತೋರಿಸುತ್ತದೆ. ವ್ಯಾಪಾರ ವಹಿವಾಟುಗಳಲ್ಲಿ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಜಿಎಸ್‍ಟಿ ತೆರಿಗೆ ಪದ್ದತಿಯು ತಂದುಕೊಟ್ಟಿರುವ ಅನುಕೂಲತೆಗಳನ್ನು ಸ್ಮರಿಸುವುದೂ ಕೂಡ ಸಹ ಈ ವರ್ಷದ ಜಿಎಸ್‍ಟಿ ದಿನಾಚರಣೆಯ ಧ್ಯೇಯವಾಗಿದೆ.

Join Whatsapp