ಫೇಸ್ ಬುಕ್ ಮೂಲಕ ಬಿಜೆಪಿ ದ್ವೇಷ ಹರಡುತ್ತಿವೆ: ಕಾಂಗ್ರೆಸ್ ಆರೋಪ

Prasthutha|

ನವದೆಹಲಿ: ದೇಶದಲ್ಲಿ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ಹರಡಲು ಬಿಜೆಪಿ ಫೇಸ್ಬುಕ್ ಅನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಈ ಸಂಬಂಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಿ ಫೇಸ್ಬುಕ್ ಮತ್ತು ವಾಟ್ಸಾಪ್ ನ ಮೇಲೆ ನಿಷೇಧ ಹೇರಲು ಕಾನೂನು ತರಬೇಕು ಎಂದು ಒತ್ತಾಯಿಸಿದೆ.

- Advertisement -

ಭಾರತದ ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಲು ಅಮೆರಿಕ ಮೂಲದ ಕಂಪೆನಿ ಯತ್ನಿಸುತ್ತಿದೆ ಮತ್ತು ಈ ಸಂಬಂಧ ಸ್ವತಂತ್ರ ತನಿಖೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ರೋಹನ್ ಗುಪ್ತಾ ಮತ್ತು ಪ್ರವೀಣ್ ಚಕ್ರವರ್ತಿ, ದೇಶದ ಏಕತೆಗೆ ಧಕ್ಕೆ ತರುವ ದ್ವೇಷವನ್ನು ಹರಡಲು ಬಿಜೆಪಿ ಫೇಸ್ಬುಕ್ ಅನ್ನು ಅಸ್ತ್ರವಾಗಿ ದುರ್ಬಳಕೆ ಮಾಡುತ್ತಿವೆ ಎಂದು ಆರೋಪಿಸಿದರು.

- Advertisement -

ಮಾತ್ರವಲ್ಲ ಈ ಪಕ್ಷವು, ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಅವರಿಗೆ ಪತ್ರ ಬರೆದು ಭಾರತದಲ್ಲಿ ಫೇಸ್ಬುಕ್, ವಾಟ್ಸಾಪ್ ನಲ್ಲಿ ಹರಡುವ ದ್ವೇಷ ಮತ್ತು ನಕಲಿ ಸುದ್ದಿಗಳ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.

Join Whatsapp