ಕ್ಯಾಷಿಯರ್ ಮುಖಕ್ಕೆ ಬಿಸಿ ಸೂಪ್ ಚೆಲ್ಲಿ ಯುವತಿ ಎಸ್ಕೇಪ್ !

Prasthutha|

ಟೆಕ್ಸಾಸ್: ತಾನು ಆರ್ಡರ್ ಮಾಡಿದ್ದ ಸೂಪ್’ಅನ್ನು ಗುಣಮಟ್ಟವಿಲ್ಲದ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀಡಿದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡ ಗ್ರಾಹಕಿಯೊಬ್ಬರು ಬಿಸಿಯಾಗಿದ್ದ ಸೂಪ್’ಅನ್ನು ಕ್ಯಾಷಿಯರ್ ಮುಖಕ್ಕೆ ಚೆಲ್ಲಿದ ಘಟನೆ ಅಮೆರಿಕಾದ ಟೆಕ್ಸಾಸ್’ನಲ್ಲಿ ನಡೆದಿದೆ.

- Advertisement -

ಟೆಕ್ಸಾಸ್’ನ ಸೋಲ್ ಡಿ ಜೆಲಿಸ್ಕೋ ರೆಸ್ಟೋರೆಂಟ್’ನಲ್ಲಿ ನವೆಂಬರ್ 7ರಂದು ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇದೀಗ ವೈರಲ್ ಆಗಿದೆ.  

ರೆಸ್ಟೋರೆಂಟ್’ಗ ಬಂದಿದ್ದ ಗ್ರಾಹಕಿಯೊಬ್ಬರು ಸೂಪ್ ಪಾರ್ಸೆಲ್ ಆರ್ಡರ್ ಮಾಡಿದ್ದಾರೆ. ಆದರೆ ಪಾರ್ಸೆಲ್ ನೀಡಿದ ಪ್ಲಾಸ್ಟಿಕ್ ಬಾಟಲಿ ಗುಣಮಟ್ಟದ್ದಾಗಿರಲಿಲ್ಲ. ಮುಚ್ಚಳ ಹಾಕಿದ ಸ್ವಲ್ಪ ಹೊತ್ತಿನಲ್ಲಿಯೇ ಅದು ಬಿಸಿ ತಾಳಲಾರದೆ ಕರಗಿತ್ತು.. ಇದರಿಂದ ಕೋಪಗೊಂಡ ಗ್ರಾಹಕಿ ರೆಸ್ಟೋರೆಂಟ್’ನ ಕ್ಯಾಷಿಯರ್ ಬಳಿ ಬಂದು ಜಗಳ ತೆಗೆದಿದ್ದಾಳೆ. ಕ್ಯಾಷಿಯರ್’ನಲ್ಲಿದ್ದ ಯುವತಿಯು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇವೆ, ತಾಳ್ಮೆಯಿಂದ ಇರಿ ಎಂದು ಸಮಾಧಾನಿಸಲು ಯತ್ನಿಸಿದರೂ ಕೇಳದ ಗ್ರಾಹಕಿ ಬಿಸಿ ಸೂಪ್’ಅನ್ನು ಕ್ಯಾಷಿಯರ್’ನ ಮುಖದ ಮೇಲೆ ಚೆಲ್ಲಿ ಅಲ್ಲಿಂದ ಪರಾರಿಯಾದ್ದಳೆ.

- Advertisement -

ರೆಸ್ಟೋರೆಂಟ್’ನಲ್ಲಿ ಕೆಟ್ಟದಾಗಿ ವರ್ತಿಸಿದ ಯುವತಿಯ ವಿರುದ್ಧ ಕೇಸು ದಾಖಲಾಗಿದ್ದು, ಟೆಕ್ಸಾಸ್ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದಲ್ಲಿ ಯುವತಿಯನ್ನು ಹುಡುಕುತ್ತಿದ್ದಾರೆ.

Join Whatsapp