ಬಿಜೆಪಿ ಶಾಸಕನ ಬರ್ತ್ ಡೇ ಪಾರ್ಟಿಯಲ್ಲಿ ಸಂಘರ್ಷ| ಇಬ್ಬರು ಸಾವು

Prasthutha|

ಮಧ್ಯಪ್ರದೇಶ: ಮಧ್ಯಪ್ರದೇಶದ ಬನ್ವಾರ್ ಗ್ರಾಮದಲ್ಲಿ ಬಿಜೆಪಿ ಶಾಸಕನ ಬರ್ತ್ ಡೇ ಪಾರ್ಟಿಯೊಂದರಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

- Advertisement -

ಮಧ್ಯಪ್ರದೇಶ ಜಬೇರಾ ಕ್ಷೇತ್ರದ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಜನ್ಮದಿನದ ಸಂಭ್ರಮದ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಜೋಗೇಂದ್ರ ಸಿಂಗ್  ಮತ್ತು ಅರವಿಂದ್ ಜೈ ಸಾವನ್ನಪ್ಪಿದ್ದಾರೆ.

 ಅರವಿಂದ ಜೈ ಎಂಬಾತ ಶಾಸಕ ಧರ್ಮೇಂದ್ರ ಸಿಂಗ್ ಲೋಧಿಯ ಬೆಂಬಲಿಗನಾಗಿದ್ದು, ಜೋಗೇಂದ್ರ ಸಿಂಗ್ ಅತಿಥಿ ಉಪನ್ಯಾಸಕನಾಗಿದ್ದ.

- Advertisement -

ಜೋಗೇಂದ್ರ ಸಿಂಗ್ ಗುಂಡು ತಗುಲಿ ಸಾವನ್ನಪ್ಪಿದ್ದು, ಅರವಿಂದ್ ಜೈ ಎಂಬ ವ್ಯಕ್ತಿಯನ್ನು ಬಡಿಗೆ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ಘಟನೆ ನಡೆಯುವ ವೇಳೆ ಧರ್ಮೇಂದ್ರ ಸಿಂಗ್ ಸ್ಥಳದಲ್ಲಿರಲಿಲ್ಲ ಎಂದು ವರದಿಯಾಗಿದೆ. ನೋಹಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp