ರೈತ ಹೋರಾಟ ಭಾರತದ ಆಂತರಿಕ ಸಮಸ್ಯೆಯಲ್ಲ ಎಂದ ಬ್ರಿಟಿಷ್ ಹೈಕಮಿಷನರ್ !

Prasthutha|

- Advertisement -

ಕಳೆದ ನೂರು ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ಅದು ಭಾರತದ ಆಂತರಿಕ ಸಮಸ್ಯೆ ಮಾತ್ರವಲ್ಲ. ಅದರ ತರಂಗಗಳು ಬ್ರಿಟನಿಗೂ ಅಪ್ಪಳಿಸಿವೆ ಎಂದು ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲಿಕ್ಸ್ ಹೇಳಿದ್ದಾರೆ. ಬ್ರಿಟನ್ ಸಂಸತ್ತು ರೈತ ಪ್ರತಿಭಟನಾಕಾರರ ಸುರಕ್ಷತೆ ಕುರಿತು ಚರ್ಚೆಗೆ ಇಳಿಯುವುದರೊಂದಿಗೆ ಅಲೆಕ್ಸ್ ಎಲಿಕ್ಸ್ “ರೈತ ಹೋರಾಟವು ಭಾರತದ ಆಂತರಿಕ ಸಮಸ್ಯೆಯಾಗಿತ್ತು. ಆದರೆ ಭಾರತೀಯ ಮೂಲದ ಅತಿಹೆಚ್ಚು ಜನರು ಬ್ರಿಟನಿನಲ್ಲೂ ವಾಸಿಸುವುದರಿಂದ ಭಾರತದ ಸಮಸ್ಯೆಗಳು ಇಲ್ಲೂ ಚರ್ಚೆಯಾಗುತ್ತಿದೆ ಮತ್ತು ಅದು ಬ್ರಿಟನ್ ರಾಜಕಾರಣದ ಮೇಲೂ ಪ್ರಭಾವ ಬೀರುತ್ತಿದೆ” ಎಂದು ಹೇಳಿದ್ದಾರೆ

ರೈತರ ಪರ ರಿಹಾನ್ನಾ ಟ್ವೀಟ್ ಮಾಡಿದ ಬಳಿಕ ರೈತ ಹೋರಾಟ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೇಂದ್ರ ಸರ್ಕಾರದ ಪರವಾಗಿ ಹಲವಾರು ಸೆಲೆಬ್ರೆಟಿಗಳು ಬ್ಯಾಟಿಂಗ್ ಮಾದಿದ್ದರು. ಆದರೆ ಈಗ ಅದು ಕೇವಲ ಭಾರತದ ಮಾತ್ರ ಸಮಸ್ಯೆಯಲ್ಲ ಅದರ ಪರಿಣಾಮ ಜಾಗತಿಕ ಮಟ್ಟದಲ್ಲೂ ಬೀರುತ್ತಿದೆ ಎಂದು ಬ್ರಿಟಿಷ್ ಹೈ ಕಮಿಷನರ್ ತಿಳಿಸಿದ್ದಾರೆ. ಆ ಮೂಲಕ ಇದೀಗ ಕೇಂದ್ರ ಸರಕಾರ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

Join Whatsapp