ಒಂದು ತಿಂಗಳೊಳಗೆ ಯಡಿಯೂರಪ್ಪ-ಈಶ್ವರಪ್ಪ ದಾಖಲೆ ಬಿಡುಗಡೆ । ಸರಕಾರ ಪತನವಾಗಲಿದೆಯೆಂದು ಭವಿಷ್ಯ ನುಡಿದ ಶಾಸಕ !

Prasthutha|

ಬೆಂಗಳೂರು:  ಒಂದು ತಿಂಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪನವರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದಾರೆ.  ಯಡಿಯೂರಪ್ಪ, ಈಶ್ವರಪ್ಪ ಮತ್ತು ರಾಘವೇಂದ್ರ ಎಲ್ಲಿದ್ದರು? ಎಲ್ಲಿಂದ ಎಲ್ಲಿಗೆ ಬಂದರು? ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿ ಇರುವ ದಾಖಲೆ ನನ್ನ ಬಳಿ ಇದೆ ಎಂದು ಸಂಗಮೇಶ್ ಹೇಳಿದ್ದಾರೆ.

- Advertisement -

 “ಇನ್ನೊಂದು ತಿಂಗಳಿನಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ದಾಖಲೆಯನ್ನೂ ಬಿಡುಗಡೆ ಮಾಡುತ್ತೇನೆ. ಈ ಬಿಜೆಪಿ ಸರ್ಕಾರ ಸರ್ವನಾಶವಾಗಲಿದೆ. ಜನರ ಸೇವೆ ಮಾಡಿ ಎಂದು ಕಳುಹಿಸಿದರೆ ಇವರು ಇಲ್ಲಿ ಬಂದು ಮಜಾ ಮಾಡುತ್ತಿದ್ದಾರೆ. ಇದರಿಂದಾಗಿ ಯಾವ ರಾಜಕಾರಣಿಗಳಿಗೂ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ, ರಾಘವೇಂದ್ರ ಹಾಗೂ ಈಶ್ವರಪ್ಪ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.  ಯಡಿಯೂರಪ್ಪ ಸರ್ಕಾರಕ್ಕೆ ಇನ್ನೂ ಕೇವಲ 2 ತಿಂಗಳು ಮಾತ್ರವೇ ಆಯುಷ್ಯ. ಮುಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂದು ಅವರು ಹೇಳಿದ್ದಾರೆ.

- Advertisement -