ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ: ಸೋಶಿಯಲ್ ಮೀಡಿಯಾ ಸ್ಟಾರ್ ಅರೆಸ್ಟ್

Prasthutha|

►ಮೊಬೈಲ್ ಪರಿಶೀಲಿಸಿದಾಗ ಬಯಲಾಯಿತು ‘ರೀಲ್ಸ್’ ನಟನ ರಿಯಲ್ ಸ್ಟೋರಿ

- Advertisement -

ತಿರುವನಂತಪುರಂ: ಕಾರು ಖರೀದಿಸಲು ಇದೆ ಜೊತೆಯಲ್ಲಿ ಬಾ ಎಂದು ಕಾಲೇಜು ವಿದ್ಯಾರ್ಥಿನಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರಗೈದ ಪ್ರಕರಣ ಸಂಬಂಧ ತಿರುವನಂತಪುರಂ ಪೊಲೀಸರು ‘ರೀಲ್ಸ್’ ನಟನನ್ನು ಬಂಧಿಸಿದ್ದಾರೆ.

ಇಲ್ಲಿನ ಚಿರಯಿನ್‌ಕೀಝ್ ನಿವಾಸಿ ವಿನೀತ್ ಬಂಧಿತ ಆರೋಪಿ. ಈತ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ನಗರದ ಲಾಡ್ಜ್‌ನಲ್ಲಿ ಅತ್ಯಾಚಾರಗೈದಿದ್ದ. ವಿದ್ಯಾರ್ಥಿನಿಯ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಪ್ರಕರಣದಡಿ ಬಂಧಿಸಿದ್ದಾರೆ.

- Advertisement -

ಆರೋಪಿಯ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಲಭಿಸಿದೆ. ಈತನ ಮೊಬೈಲ್‌ನಲ್ಲಿ ಹಲವು ಯುವತಿಯರು, ಮಹಿಳೆಯರ ಜೊತೆಗಿನ ಖಾಸಗೀ ದೃಶ್ಯಗಳಿದ್ದು, ವಿನೀತ್ ಹಲವರನ್ನು ಪುಸಲಾಯಿಸಿ ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ತಿಳಿದುಬಂದಿದೆ.

ಟಿಕ್‌ಟಾಕ್‌ನಲ್ಲಿ ನಟಿಸಿ ವೀಡಿಯೋ ಮಾಡುತ್ತಿದ್ದ ವಿನೀತ್, ಟಿಕ್‌ಟಾಕ್ ನಿಷೇಧಿಸಲ್ಪಟ್ಟ ಬಳಿಕ ಇನ್‌ಸ್ಟಗ್ರಾಂ‌ನಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದ. ಈತನಿಗೆ ಸುಮಾರು ನಾಲ್ಕು ಲಕ್ಷದಷ್ಟು ಫಾಲೋವರ್ಸ್‌ಗಳಿದ್ದು, ತನಗೆ ಸೋಶಿಯಲ್ ಮೀಡಿಯಾದಲ್ಲಿ ದೊರೆತ ಮನ್ನಣೆಯನ್ನೇ ದುರುಪಯೋಗಪಡಿಸಿಕೊಂಡಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್‌ಗಳನ್ನು ಹೇಗೆ ಹೆಚ್ಚಿಸಬಹುದು ಎಂದು ವಿದ್ಯಾರ್ಥಿನಿ, ಯುವತಿಯರಿಗೆ ಸಲಹೆ ನೀಡುವ ನೆಪದಲ್ಲಿ ಸಲುಗೆ ಬೆಳೆಸಿ ಬಳಿಕ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆತನ ಮೊಬೈಲ್ ನಲ್ಲಿರುವ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಮುಂದಿಟ್ಟುಕೊಂಡು ಅವರನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲಾಗಿದೆಯಾ ಎಂಬುದನ್ನೂ ತನಿಖೆ ನಡೆಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp