ಇನ್ಮುಂದೆ ನೀರು, ವಿದ್ಯುತ್ ಬಿಲ್ ವಿಳಂಬವಾದರೆ , ರೈಲು ಟಿಕೇಟು ಕಾನ್ಸಲ್ ಮಾಡಿದರೆ ಅದಕ್ಕೂ ಜಿಎಸ್ ಟಿ ಅನ್ವಯ

Prasthutha|

ನವದೆಹಲಿ:  ಕೇಂದ್ರ ಹಣಕಾಸು ಇಲಾಖೆ ಜಾರಿಗೊಳಿಸಿದ ಹೊಸ ನಿಯಮದ ಪ್ರಕಾರ ರೈಲು ಟಿಕೆಟ್ ಬುಕ್ ಮಾಡಿ, ಅನಿವಾರ್ಯ ಕಾರಣಗಳಿಂದಾಗಿ ಟಿಕೆಟ್ ರದ್ದು ಮಾಡಿದರೆ ಅದಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಅನ್ವಯವಾಗಲಿದೆ.

- Advertisement -

ಟಿಕೆಟ್ ರದ್ದುಗೊಳಿಸುವ ಪ್ರಕ್ರಿಯೆಯು ಸೇವೆಯೆಂದೇ ಪರಿಗಣಿಸಲ್ಪಡುವುದರಿಂದ ಟೆಕೆಟ್ ರದ್ದುಗೊಳಿಸುವಾಗ ವಿಧಿಸಲಾಗುವ ಶುಲ್ಕಕ್ಕೆ ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಹಾಗೂ ಕಸ್ಟಮ್ಸ್ ಗಳ ಮಂಡಳಿಯ (ಸಿಬಿಐಸಿ) ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರೈಲು ಟಿಕೆಟ್ ಮಾತ್ರವಲ್ಲ, ಹೊಟೇಲ್ ರೂಂ ಬುಕ್ ಮಾಡಿ ಅದನ್ನು ರದ್ದು ಮಾಡಿದರೆ, ಸಿನೆಮಾ, ಕ್ರೀಡೆ ಮುಂತಾದ ಮನೋರಂಜನೆ ಟಿಕೆಟ್ಗಳನ್ನು ಬುಕ್ ಮಾಡಿ ಆನಂತರ ಟಿಕೆಟ್ ರದ್ದುಗೊಳಿಸಿದರೂ ಕ್ಯಾನ್ಸಲೇಷನ್ ಶುಲ್ಕಕ್ಕೆ ಈ ಜಿ.ಎಸ್.ಟಿ ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

- Advertisement -

ಜಿಎಸ್ ಟಿ ಹೊಸ ನಿಯಮಾವಳಿ ಪ್ರಕಾರ ಇನ್ಮುಂದೆ ನೀರು ಮತ್ತು ವಿದ್ಯುತ್ ನಂತಹ ಸೇವೆಗಳಿಗೆ ಬಿಲ್ ಗಳನ್ನು ತಡವಾಗಿ ಪಾವತಿಸದರೆ ಅದಕ್ಕೂ ಸಹ ಜಿ.ಎಸ್.ಟಿ ವಿಧಿಸಲಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ವಿವಿಧ ಸರಕುಗಳ ಮೇಲೆ ವಿಧಿಸಲಾದ ಜಿ.ಎಸ್.ಟಿ ಯಿಂದಾಗಿ, ಸಾಮಾನ್ಯ ಜನರಲ್ಲಿ ಅಸಮಾಧಾನದ ವಾತಾವರಣವಿದ್ದು, ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕಿಳಿದಿದೆ. ಇದೀಗ ದಿನಕ್ಕೊಂದರಂತೆ ತೆರಿಗೆ ಹೇರುವ ಕೇಂದ್ರದ ನಡೆ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Join Whatsapp