ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

Prasthutha|

►ಬ್ಯಾರಿ ಅಕಾಡಮಿ ಸದಸ್ಯರಾಗಿ ಎಂ.ಕೆ ಮಠ, ಅಬ್ದುಲ್ ರಹಿಮಾನ್, ಹೈದರಾಲಿ, ಮುಸ್ತಫಾ ಆಯ್ಕೆ

- Advertisement -

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಾತಿ ಮಾಡಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಅಬ್ದುಲ್ ರಹಿಮಾನ್, ಹೈದರಾಲಿ, ಎಂ.ಕೆ.ಮಠ ಮತ್ತು ಮಹಮ್ಮದ್ ಮುಸ್ತಫಾ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜೀತ್ ನಾಗಪ್ಪ ಬಸಾಪುರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ತಿಪ್ಪೇಸ್ವಾಮಿ ಮತ್ತು ದತ್ತಾತ್ರೇಯ ಅರಳಿಕಟ್ಟೆ ನೇಮಕವಾಗಿದ್ದಾರೆ.

- Advertisement -

ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸದಸ್ಯರಾಗಿ ರಾಮ್ ಗೌತಮ್ ಗುರುಸಿದ್ದಪ್ಪ ಮಲ್ಲಾಪುರ, ಕಮಲ್ ಅಹಮ್ಮದ್ ಮತ್ತು ಶಿಲ್ಪಾ ಕಡಕಬಾವಿ ನೇಮಕಗೊಂಡಿದ್ದಾರೆ.

ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಶ್ರೀಧರ್ ಹೆಗಡೆ, ಪ್ರದೀಪ್ ಚಂದ್ರ ಕುತ್ಪಾಡಿ, ಆರತಿದೇವ, ಜೀವನ್ಕುಮಾರ್, ವಿಜಯ್ಕುಮಾರ್, ಗಣಪತಿ ಹಿತ್ಲಕೈ, ಎಂ.ಎನ್. ಕಿರಣ್ಕುಮಾರ್ ಮತ್ತು ಪ್ರಸನ್ನಕುಮಾರ್ ನೇಮಕಗೊಂಡಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿಗೆ ಡಾ. ಅಪ್ಪಾಜಿ, ಬಸವರಾಜ ಶಿವಪ್ಪ, ಶಿವೇಶ್ವರಿ ಗೌಡ, ಸಣ್ಣ ವೀರಪ್ಪ ಹಾಲಪ್ಪ ಸದಸ್ಯರಾಗಿ ನೇಮಕವಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಸದಸ್ಯರಾಗಿ ಗಣೇಶ್ ಉಡುಪ, ನಾಗರಾಜ ಹೆಗಡೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಡಾ. ಕೇಶವ ಬಂಗೇರ ಸದಸ್ಯರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಕೌಸಲ್ಯಾ ಸತೀಶ, ನಾಗೇಶ ಕಾಲೂರ, ಪ್ರಮೀಳಾ ನಾಚಯ್ಯ, ಚಾಮರ ದಿನೇಶ್ ಬೆಳ್ಳಪ್ಪ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ರಂಗ ಸಮಾಜ ಅಕಾಡೆಮಿಗೆ ಶಶಿಧರ ನರೇಂದ್ರ, ಡಾ. ಶೀನ ನಡೋಳಿ, ರಾಜಣ್ಣ ಜೇವರ್ಗಿ, ದಾಕ್ಷಾಯಿಣಿ ಭಟ್ ಮತ್ತು ಟಿ.ಆರ್.ಗುರುಪ್ರಸಾದ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಡ್ಯಾನಿ ಪೇರೆರ ಮತ್ತು ರಾಜೀವ್ ಲೋಚನ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ.

Join Whatsapp